ವಿಕಲಚೇತನರಿಗೆ 5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆ ಘೋಷಿಸಿದ ಸಿಎಂ ಬೊಮ್ಮಾಯಿ.

ಬೆಂಗಳೂರು,ಡಿಸೆಂಬರ್,3,2022(www.justkannada.in):  ವಿಕಲಚೇತನರ ಆರೋಗ್ಯಕ್ಕಾಗಿ  5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆಯನ್ನ  ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಕಲಚೇತನರಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು,  ವಿಕಲಚೇತನರ ಆರೋಗ್ಯಕ್ಕಾಗಿ 5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆ ಘೋಷಣೆ ಮಾಡಿದ್ದೇವೆ.   ಸರ್ಕಾರ ನೀಡುವ ಮನೆಗಳಲ್ಲಿ ವಿಶೇಷಚೇತನರಿಗೆ ಶೇ.3 ರಷ್ಟು ಮೀಸಲು ನೀಡಲಾಗುತ್ತದೆ. ಅಂಗವಿಕಲ ಮಕ್ಕಳಿಗೆ ವಿಶೇಷ ತರಬೇತಿ ಕೇಂದ್ರ  2000 ಸೈಕಲ್ ನೀಡಲು ತೀರ್ಮಾನಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ . ಸಂಸದ ಪಿ.ಸಿ ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಸೇರಿ ಹಲವರು ಉಪಸ್ಥಿತರಿದ್ದರು.

Key words: CM Bommai -announced –special- health- insurance – disabled -people