ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಿ: ಸುಧಾಮೂರ್ತಿ

 

ಮೈಸೂರು, ಜು.27, 2021 : (www.justkannada.in news) ಮಕ್ಕಳು ಪ್ರಶ್ನೆ ಕೇಳುವುದನ್ನು ಯಾರೂ ತಡೆಯಬಾರದು. ಪ್ರಶ್ನೆ ಕೇಳದ ಮಗುವಿನಲ್ಲಿ ಕುತೂಹಲವೇ ಬೆಳೆಯುವುದಿಲ್ಲ ಎಂದು ಇನ್ಫೋಸಿಸ್‌ನ ಸುಧಾಮೂರ್ತಿ ಅಭಿಪ್ರಾಯ ಪಟ್ಟರು.

ಮೈಸೂರು ವಿವಿಯ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚುವಲ್ ಲೈವ್ ಮೂಲಕ ಸುಧಾಮೂರ್ತಿ ಮಾತನಾಡಿದರು, ಮಕ್ಕಳಿಗೆ ಕೇವಲ ಅಂಕ ಗಳಿಸುವುದನ್ನು ಶಿಕ್ಷಕರು ಹೇಳಿಕೊಡಬಾರದು. ಬದಲಿಗೆ ಸೋಲನ್ನು ಹೇಗೆ ಎದುರಿಸಬೇಕು? ಆತ್ಮವಿಶ್ವಾಸದಿಂದ ಬದುಕನ್ನು ಸಾಗಿಸುವುದು ಹೇಗೆ ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

jk
ನಡೆಯಬೇಕಾದರೆ ಎಡವಿ ಬೀಳುವುದು ಸಾಮಾನ್ಯ. ಕಷ್ಟಗಳು ಇರದ ಜೀವನ ಇದೆಯಾ? ನಮ್ಮ ಮೈನಸ್ ಪಾಯಿಂಟ್ ನಮಗೆ ಗೊತ್ತಿದ್ದರೆ, ಅದನ್ನು ಬಹುಬೇಗ ತಿದ್ದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಪಾಠದಷ್ಟೇ ಆಟದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಮಕ್ಕಳಿಗೆ ಹೊಸ ಹೊಸ ಕೌಶಲ್ಯಗಳನ್ನು ಹೇಳಿಕೊಡಬೇಕು. ಹಣಕಾಸು ನಿರ್ವಹಣೆ ಬಗ್ಗೆ ಹೇಳಿಕೊಡಬೇಕು. ಸಾಮಾನ್ಯ ಜ್ಞಾನ ತುಂಬಾ ಮುಖ್ಯ. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಎಲ್ಲಾ ಕಾಲಕ್ಕೂ ಜೀವನ ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್.ಅಯ್ಯಪ್ಪನ್, ಮೈವಿವಿ ಕುಲಪತಿ ಪ್ರೊ .ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಹಾಜರಿದ್ದರು.

ENGLISH SUMMARY…

Develop a habit of questioning: Sudhamurthy
Mysuru, July 27, 2021 (www.justaknnada.in): “Nobody should stop children from asking questions. Otherwise, they will never get the curiosity of questioning at all,” opined Mrs. Sudhamurthy of the Infosys Foundation.
She participated in a virtual live program, organized by the University of Mysore as part of its Foundation Day celebrations held at the Crawford Hall. “Students should not be taught only about scoring marks. They should also be taught how to face failures, how to be confident,” she advised.
“Failures are common. There is no life without problems. If we know our minus points we can rectify them and achieve in our lives. Like studies, students should also develop an interest in sports,” she said.
Prof. S. Ayyappan, President, Karnataka Science, and Technical Academy, Prof. G. Hemanth Kumar, Vice-Chancellor, University of Mysore, and Prof. R. Shivappa were present.
Keywords: Foundation Day/ University of Mysore/ Sudhamurthy/ Infosys Foundation/ habit/ questioning

key words : mysore-university-foundation-day-celebration-vc-hemanth-kumar-mysore