ಕೋವಿಡ್ ಸಂತ್ರಸ್ತರಿಗೆ ಮೈಸೂರು ವಿವಿ ನೌಕರರ ಒಂದು ದಿನದ ವೇತನ: ಕುಲಪತಿ ಪ್ರೊ.ಹೇಮಂತ್ ಕುಮಾರ್

ಮೈಸೂರು, ಮೇ 21, 2021 (www.justkannada.in): ಮೈಸೂರು ವಿವಿ ನೌಕರರಿಂದ ಒಂದು ದಿನದ ವೇತನವನ್ನು ಕೋವಿಡ್ ಸಂತ್ರಸ್ತರಿಗೆ ನಿಧಿಗೆ ನೀಡಲು ಮೈಸೂರು ವಿವಿ ನಿರ್ಧರಿಸಿದೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮೈಸೂರು ವಿವಿಯ ಎಲ್ಲ ಸಿಬ್ಬಂದಿಗಳಿಂದ ಒಂದು ದಿನದ ವೇತನವನ್ನು ಕೋವಿಡ್ ಪರಿಹಾರ ನಿಧಿಗೆ ನೀಡುವ ಸಂಬಂಧ ಎಲ್ಲರಿಗೂ ಸುತ್ತೋಲೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಂದು ವೇತನ ನೀಡುವ ಸಂಬಂಧ ಯಾವ ಸಿಬ್ಬಂದಿಗೂ ಒತ್ತಾಯವಿಲ್ಲ, ಆದರೆ ಸ್ವಂತ ಆಸಕ್ತಿಯಿಂದ ನೀಡಿದರೆ ಒಳ್ಳೆಯದು. ನೆರವು ನೀಡಲು ಆಸಕ್ತಿ ಇಲ್ಲ ಎಂದರೆ ಯಾರಿಗೂ ಒತ್ತಡವಿಲ್ಲ. ಇನ್ನು ಕೊರೊನಾ ಲಾಕ್ ಡೌನ್ ತೆರವುಗೊಳಿಸಿದರೂ ಜೂನ್ ಕೊನೆಯವರೆಗೂ ಆಫ್ ಲೈನ್ ತರಗತಿ ಆರಂಭವಾಗುವುದು ಅನುಮಾನ. ಹೀಗಾಗಿ ಅಲ್ಲಿಯವರೆಗೂ ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಾಗಿರಬೇಕು. ಸದ್ಯ ಎಂದಿನಂತೆ ಎಂದು ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.