” ಎಜುಕೇಷನ್ ವರ್ಲ್ಡ್” ರ್ಯಾಂಕಿಂಗ್, ಮೈಸೂರು ವಿವಿಗೆ 38 ನೇ ಸ್ಥಾನ.

ಮೈಸೂರು, ಜೂ.01, 2020 : (www.justkannada.in news ) ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ” ಎಜುಕೇಷನ್ ವರ್ಲ್ಡ್” ರ್ಯಾಂಕಿಂಗ್ (E.W.RANKING) ನಲ್ಲಿ 38 ನೇ ಸ್ಥಾನ ಗಳಿಸಿದ್ದು, ಕರ್ನಾಟಕದಲ್ಲಿ 2 ನೇ ಸ್ಥಾನದಲ್ಲಿದೆ.

ಸಂಶೋಧನೆ ಮತ್ತು ಆವಿಷ್ಕಾರ, ಫ್ಯಾಕಲ್ಟಿ, ಮೂಲಸವಲತ್ತು ಸೇರಿ 10 ವಿವಿಧ ಅಂಶಗಳನ್ನು ಈ ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾಗಿತ್ತು. ಒಟ್ಟು 1300 ಅಂಕಗಳಿಗೆ ಮೈಸೂರು ವಿವಿ 884 ಅಂಕಗಳಿಸಿ ಈ ಸ್ಥಾನ ತಲುಪಿದೆ.

mysore-university-education-world-ranking-vc

ಈ ರ್ಯಾಂಕಿಂಗ್ ಬಂದಿದಕ್ಕೆ ಸಂತಸ ವ್ಯಕ್ತಪಡಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್, ಇದು ವಿವಿಯ ನ್ಯಾಕ್ ಮಾನ್ಯತೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ ಇದಕ್ಕೆ ಕಾರಣರಾದ ವಿವಿಯ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

key words : mysore-university-education-world-ranking-vc