ಮೈಸೂರು ವಿವಿ: ಎರಡು ಹೊಸ ಕೋರ್ಸ್ ಆರಂಭಕ್ಕೆ ಅನುಮೋದನೆ.

ಮೈಸೂರು,ಜೂನ್,30,2022(www.justkannada.in): ಮೈಸೂರು ವಿಶ್ವವಿದ್ಯಾಲಯದಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ರಿಪ್ರೊಡಕ್ಷನ್ ಜೆನಿಟಿಕ್ಸ್ ಹಾಗೂ ಡಿನ್ಸ್ ಸ್ಟಡೀಸ್ ಕೋರ್ಸ್ ಆರಂಭಿಸಲು ಗುರುವಾರ ನಡೆದ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರಕಿತು.

ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಂಎಸ್ಸಿಗೆ ಕ್ಲಿನಿಕಲ್ ರಿಪ್ರೊಡಕ್ಷನ್ ಜೆನಿಟಿಕ್ಸ್ ಕೋರ್ಸ್ ಅನ್ನು ಮೆಡಿವೇವ್, ಐವಿಎಸ್ ಮತ್ತು ರ್ಟಿಲಿಟ್ ರಿಸರ್ಚ್ ಆಸ್ಪತ್ರೆ ಮತ್ತು ಜೆನೆಟಿಕ್ಸ್ ಮತ್ತು ಜನೋಮಿಕ್ಸ್ ಅಧ್ಯಯನ ವಿಭಾಗದ ಸಹಯೋಗದಿಂದ ಪ್ರಾರಂಭಿಸಲಾಗುವುದು. ಈ ಹಿಂದೆ ಮಿಲಿಟರಿ ಸೈನ್ಸ್ ಹೆಸರಿನಲ್ಲಿ ಕೋರ್ಸ್ ಶುರು ಮಾಡಲಾಗಿತ್ತು. ಆದರೆ, ಅದು ಅರ್ಧಕ್ಕೆ ನಿಂತ ಪರಿಣಾಮ ಇದೀಗ ಬಿಎ ಮತ್ತು ಎಂಎನಲ್ಲಿ ಡಿನ್ಸ್ ಸ್ಟಡೀಸ್ ಕೋರ್ಸ್ ಆರಂಭಿಸಲು ಶಿಕ್ಷಣ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಕ್ಕಿತು. ಅಲ್ಲದೆ, ಗಡಿನಾಡು ಕನ್ನಡಿಗರಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಚಿತ ಶಿಕ್ಷಣ ನೀಡುವ ಪ್ರಸ್ತಾವಕ್ಕೂ ಒಪ್ಪಿಗೆ ಸಿಕ್ಕಿತು. ಈ ವೇಳೆ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಚಾಮರಾಜ ಗಡಿಭಾಗದಲ್ಲಿನ ವಿದ್ಯಾರ್ಥಿಗಳಿಗೆ ಅಂದರೆ ತಮಿಳುನಾಡಿನ ತಾಳವಾಡಿಯಲ್ಲಿ ಕನ್ನಡ ಮಾಧ್ಯಮ ವ್ಯಾಸಂಗ ಮಾಡಿದವರು ಉನ್ನತ ವಿದ್ಯಾಭಾಸಕ್ಕಾಗಿ ಕರ್ನಾಟಕಕ್ಕೆ ಬಂದರೆ ಇಲ್ಲಿನ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಶುಲ್ಕ ತೆರಬೇಕಾಗಿದೆ. ಜೊತೆಗೆ ವಿದ್ಯಾರ್ಥಿ ವೇತನಕ್ಕೂ ಅರ್ಜಿ ಸಲಲಿಸುವಂತಿಲ್ಲ. ಹಾಗಾಗಿ ಬಿಎ, ಬಿಇಡಿ, ಎಂಎ ಹಾಗೂ ಎಂಎಡ್, ಪಿಎಚ್‌ ಡಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಅಥವಾ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂಬ ಉದ್ದೇಶ ಇಟ್ಟುಕೊಳ್ಳಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಜೊತೆ ಸೇರಿ ಉನ್ನತ ಶಿಕ್ಷಣ ಪಡೆಯಲು ಬರುವ ಗಡಿನಾಡು ಕನ್ನಡಿಗರಿಗೆ ಶಿಷ್ಯವೇತನ ನೀಡಲಾಗುವುದು ಎಂದು ತಿಳಿಸಿದರು.

ಚಿನ್ನದ ದತ್ತಿ ಪದಕ

ಲತಾದೇವಿ ಮತ್ತು ಪ್ರೊ.ಬಿ.ಎಚ್.ಸುರೇಶ್, ಪ್ರೊ.ಜಿ.ವೆಂಕಟೇಶ್ ಕುಮಾರ್, ಪದ್ಮ ಸತ್ಯನಾರಾಯಣ ಮತ್ತು ಎಂ.ಬಿ.ಅನುರಾಧ ಎಂ. ಚೌಡೇಗೌಡ ಹಾಗೂ ಡಾ.ಬಿ.ಆರ್.ಅಂಬೇಡ್ಕರ್, ಪ್ರೊ.ಎನ್.ನಿಂಗಯ್ಯ ಚಿನ್ನದ ಪದಕ ದತ್ತಿ ಸ್ಥಾಪನೆ ಮಾಡಲು ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಭಾರ ಪ್ರಾಂಶುಪಾಲರ ನೇಮಕ

ಮೈಸೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಪ್ರಭಾರ ಪ್ರಾಂಶುಪಾಲರನ್ನು ನೇಮಕ ಮಾಡುವ ವಿಚಾರದಲ್ಲಿ ಚರ್ಚೆ ನಡೆಯಿತು. ಮೂರು ವರ್ಷಕ್ಕೊಮ್ಮೆ ರೋಟೆಶನ್ ಮಾದರಿಯಲ್ಲಿ ಎಲ್ಲರಿಗೂ ಅವಕಾಶ ಸಿಗುವಂತೆ ಪ್ರಾಂಶುಪಾಲರನ್ನು ನೇಮಕ ಮಾಡಲು ಪ್ರಸ್ತಾಪಿಸಲಾಯಿತು. ಆದರೆ, ಈ ರೀತಿ ಮಾಡುವುದರಿಂದ ಹಿರಿಯ ಅನುಭವ ಇರುವ ಪ್ರಾಧ್ಯಾಪಕರಿಗೆ ಕಿರಿಯರೊಂದಿಗೆ ಕೆಲಸ ಮಾಡಲು ಮುಜುಗರ ಆಗಬಹುದೆಂದು ಎಂಎಲ್‌ ಸಿ ಮಂಜೇಗೌಡ ತಿಳಿಸಿದರು. ನಂತರ ಮಾತನಾಡಿದ ಕುಲಸಚಿವ ಪ್ರೊ.ಆರ್.ಶಿವಪ್ಪ, ಈಗಾಗಲೇ ಸ್ನಾತಕೋತ್ತರದಲ್ಲಿ ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುವುದು ಸಾಮಾನ್ಯ. ಕುಲಪತಿಯಾದವರು ತಮ್ಮ ಅವಧಿ ಮುಗಿದ ಬಳಿಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಸಾಕಷ್ಟು ಉದಾಹರಣೆ ಇದೆ. ಹಾಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು. ನಂತರ ಅನುಮೋದನೆ ದೊರೆಕಿತು.

ಮೇಕಪ್ ಪರೀಕ್ಷೆಗೆ ತಿದ್ದುಪಡಿ

ಕೋವಿಡ್ ನಂತರ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿದೂರಿಸುವ ದೃಷ್ಟಿಯಿಂದ ಪದವಿಯಲ್ಲಿ ಐದನೇ ಸೆಮಿಸ್ಟರ್‌ ವರೆಗೆ ಮಾತ್ರ ಮೇಕಪ್ ಪರೀಕ್ಷೆ ನಡೆಸಲು ಸಭೆ ಅನುಮೋದನೆ ನೀಡಿತು. ಆರನೇ ಸೆಮಿಸ್ಟರ್‌ ಗೂ ಅವಕಾಶ ಕೊಟ್ಟರೆ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿತ್ತು. ಈ ನಿಟ್ಟಿನಲ್ಲಿ ಕೊನೆ ಸೆಮಿಸ್ಟರ್‌ ಗೆ ಮೇಕಪ್ ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಯಿತು.

ಕುಲಸಚಿವ ಪ್ರೊ.ಆರ್.ಶಿವಪ್ಪ, ವಿಜ್ಞಾನ ತಂತ್ರಜ್ಞಾನ ಡೀನ್ ಪ್ರೊ.ಬಸವರಾಜಪ್ಪ, ಕುಲಸಚಿವ ಪರೀಕ್ಷಾಂಗ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಎಂಎಲ್‌ ಸಿ ಮಂಜೇಗೌಡ, ಸರಕಾರ ನಾಮನಿರ್ದೇಶಿತ ಸದಸ್ಯರಾದ ಶಶಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: Mysore university- Approved – start – two -new -courses.

ENGLISH SUMMARY…

UoM: Approval to start two new courses
Mysuru, June 30, 2022 (www.justkannada.in): The general body meeting of the Education Board of the University of Mysore today gave its approval to commence two new courses ‘Clinical Reproduction Genetics,’ and ‘Deans Studies Course,’ from the academic year 2022-23.
The meeting was held under the leadership of Prof. G. Hemanth Kumar, Vice-Chancellor, University of Mysore. Approval to start the ‘Clinical Reproduction Genetics course under M.Sc. was granted. It will be commenced in association with the Mediwave IVS and Fertility and Research Hospital and Genetics and Genomics Research Division.
Earlier a course was commenced under the name Military Science. But as it stopped midway, now approval has been granted to start the ‘Deans Studies Course,’ in BA and MA. Approval was also granted to the proposal of providing free education at the University of Mysore to the Kannadigas living in the border areas of the state.
In his address, Prof. G. Hemanth Kumar, Vice-Chancellor, University of Mysore said, “the students living in the border areas of Chamarajanagara, like those who are in Talawadi in Tamil Nadu, who have studied Kannada, have to bear a higher fee if they come to Karnataka to pursue higher education. They also cannot apply for scholarships. Hence, it is proposed to provide concession in fees or offer free education for such students who come here to pursue BA, B.Ed., MA and M.Ed., Ph.D. In association with the Border Development Authority, scholarships will be provided to the border area Kannadigas who come here to pursue higher education,” he explained.
It was also decided to establish the Latadevi and Prof. B.H. Suresh, Prof. G. Venkatesh Kumar, Padma Satyanarayana, and M.B. Anuradha M. Chowdegowda and Dr. B.R. Ambedkar, Prof. N. Ningaiah Gold medal Endowment.
Registrar Prof. R. Shivappa, Science and Technology Department Dean Prof. Basavarajappa, Registrar (Exams) Prof. A.P. Jnanaprakash, MLC C. Manjegowda, Govt. nominated member Shashikumar and others attended the meeting.

Keywords: University of Mysore/ Education Board/ General Body Meeting/ two new courses