ಇಂದು ಸಂಜೆ 7 ಗಂಟೆಗೆ ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನಾವಿಸ್ ಡಿಸಿಎಂ ಆಗಿ ಶಿಂಧೆ ಪದಗ್ರಹಣ.

ಮುಂಬೈ,ಜೂನ್,30,2022(www.justkannada.in):  ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆಯಿಂದಾಗಿ ಮಹಾವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿದ್ದು. ಸಂಜೆ 7 ಗಂಟೆಗೆ ನೂತನ ಸಿಎಂ ಆಗಿ ದೇವೆಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

3ನೇ ಬಾರಿಗೆ ಮಹಾರಾಷ್ಟ್ರ ಸಿಎಂ ಆಗಿ ದೇವೆಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದರೇ ಶಿವಸೇನೆ ರೆಬಲ್ ಶಾಸಕ ಏಕನಾಥ್ ಶಿಂಧೆ ಡಿಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ.  ಇಂದು ಗೋವಾದಿಂದ ಮುಂಬೈಗೆ ಆಗಮಿಸಿದ ಏಕನಾಥ್ ಶಿಂಧೆ  ಅವರು ದೇವೆಂದ್ರ ಫಡ್ನಾವಿಸ್ ಜೊತೆ ರಾಜಭವನಕ್ಕೆ ತೆರಳಿ ನೂತನ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ.

ನೂತನ ಮೈತ್ರಿ ಸರ್ಕಾರಕ್ಕೆ ಏನನಾಥ್ ಸಿಂಧೆ ಬಣದ 49 ಶಾಸಕರು ಬೆಂಬಲ ನೀಡಿದ್ದಾರೆ. ಸಂಜೆ 7 ಗಂಟೆಗೆ ಮುಂಬೈನ ರಾಜಭವನದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ದೇವೆಂದ್ರ ಫಡ್ನಾವಿಸ್ ಡಿಸಿಎಂ ಆಗಿ ಏಕನಾಥ್ ಸಿಂಧೆ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಉಳಿದ ಶಾಸಕರು ಸಚಿವರಾಗಿ ಪ್ರದಗ್ರಹಣ ಮಾಡಲಿದ್ದಾರೆ ಎನ್ನಲಾಗಿದೆ.

Key words: Devendra Fadnavis -sworn – Maharashtra -CM -today