20 ಚಿನ್ನದ ಪದಕ ಪಡೆದ ಚೈತ್ರಾ ನಾರಾಯಣ್ ಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವಾಸೆ.

ಮೈಸೂರು,ಸೆಪ್ಟಂಬರ್,7,2021(www.justkannada.in):  ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿಗೆ 15 ಕಿ.ಮೀ ದೂರ ಶಿಗೆಳ್ಳಿ ಗ್ರಾಮದವರಾದ ಚೈತ್ರ ನಾರಾಯಣ್ ಹೆಗಡೆ ಅವರಿಗೆ ರಸಾಯನಶಾಸ್ತ್ರ ವಿಭಾಗದಲ್ಲಿ ಇಡೀ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದು, 20 ಚಿನ್ನದ ಪದಕ ಹಾಗೂ ನಾಲ್ಕು ದತ್ತಿ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಛಲವೊಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಈ ವಿದ್ಯಾರ್ಥಿನಿ ಸಾಬೀತು ಮಾಡಿದ್ದಾಳೆ. ಆರ್ಗಾನಿಕ್, ಇನ್ ಆರ್ಗಾನಿಕ್ ಮತ್ತು ಫಿಜಿಕಲ್ ಕೆಮಿಸ್ಟ್ರಿಯಲ್ಲಿ ತಲಾ 3 ಚಿನ್ನದ ಪದಗಳನ್ನು ಪಡೆದಿರುವ ಚೈತ್ರಾ ಒಟ್ಟಾರೆ ಅತಿ ಹೆಚ್ಚು ಫಲಿತಾಂಶ ಪಡೆದು ಇನ್ನೂ 11 ಪದಕಗಳೊಂದಿಗೆ ಒಟ್ಟು 20 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಚೈತ್ರ ನಾರಾಯಣ್ ಹೆಗಡೆ ಅವರ ತಂದೆ ನಾರಾಯಣ ಹೆಗ್ಡೆ, ತಾಯಿ ಸುಮಂಗಲಾ ಹೆಗ್ಡೆ. ಚೈತ್ರಾ  ಬಿಎಸ್ಸಿ ಪದವಿಗಾಗಿ ಮೈಸೂರಿನ ಯುವರಾಜ ಕಾಲೇಜು ಸೇರಿದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿದರು. ಇದೀಗ ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರತಿದಿನ ಓದುತ್ತಿದ್ದೆ.

ಪ್ರತಿದಿನ ಅಧ್ಯಾಪಕರು ತರಗತಿಯಲ್ಲಿ ಹೇಳಿಕೊಟ್ಟದ್ದನ್ನು ಹಾಸ್ಟೆಲ್ ಗೆ ಬಂದ ಕೂಡಲೇ ಪುನರಾವರ್ತನೆ ಮಾಡಿಕೊಳ್ಳುತ್ತಿದ್ದೆ.  ಸ್ನೇಹಿತರೊಂದಿಗೂ ಚರ್ಚೆ ಮಾಡುತ್ತಿದ್ದೆ. ಹಾಗಾಗಿ ಹೆಚ್ಚು ನೆನಪಿನಲ್ಲಿ ಉಳಿಯುತ್ತಿತ್ತು‌. ಪರೀಕ್ಷೆ ಒಂದು ತಿಂಗಳಿದೆ ಎನ್ನುವಾಗ ಮಾತ್ರ ಸೀರಿಯಸ್ ಆಗಿ ಓದುತ್ತಿದ್ದೆ ಎಂದು ನಗೆ ಬೀರಿದರು‌.

ಸಂಶೋಧಕಿಯಾಗುವ ಆಸೆ.

ಚೈತ್ರಾ ಅವರು ಮುಂದೆ ರಸಾಯನಶಾಸ್ತ್ರ ವಿಷಯದಲ್ಲೇ ಸಂಶೋಧನೆ ಮಾಡಲು ಬಯಸಿದ್ದಾರೆ. ಸದ್ಯ ಫೆಲೋಶಿಪ್ ಗೆ ಆಯ್ಕೆಯಾಗಿದ್ದು, ಪಿಎಚ್‌ಡಿ ನಂತರ ಸಂಶೋಧಕಿಯಾಗುವ ಗುರಿ ಹೊಂದಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಗೆ ಸೇರಬೇಕು’ ಎನ್ನುತ್ತಾರೆ ಚೈತ್ರಾ.

ENGLISH SUMMARY….

20 gold medals winner Chaitra Narayan wants to work at IISc
Mysuru, September 7, 2021 (www.justkannada.in): Chaitra Narayan, a resident of Sheegalli Village, 15 km away from Sirsi Taluk, in Uttar Kannada District has earned 20 gold medals and four charitable rewards in Chemistry.
Chaitra has won a total number of 20 gold medals including 3 gold medals in organic, inorganic, and physical chemistry respectively, and 11 other medals. She has proven that nothing is impossible for anyone by hard work and commitment.
She is the daughter of Narayana Hegde and Sumangala Hegde. She did her B.Sc. at Yuvaraja College and M.Sc.at Manasagangotri. She is presently working as a guest lecturer at the Yuvaraja College in Mysuru.
In the future, Chaitra aspires to research in Chemistry. She has been presently selected for a fellowship and is doing her Ph.D. Serving for the Indian Institute of Science is her dream.
Keywords: University of Mysore/ 101st Convocation/ Chaitra Narayan/ 20 gold medals/ IISc

Key words: mysore –university-101st  convocation-Chaitra Narayan-20-gold medallist- works – Indian -Institute – Science