‘ಯು ಡಿಜಿಟಲ್’ ವಾರ್ಷಿಕೋತ್ಸವ: ಸಂಭ್ರಮಕ್ಕೆ ಕ್ಷಣಗಣನೆ…

ಮೈಸೂರು,ಮಾರ್ಚ್,5,2021(www.justkannada.in):  ‘ಯು ಡಿಜಿಟಲ್’ ಕೇಬಲ್ ನೆಟ್‌ವರ್ಕ್‌ ನ ಪ್ರಥಮ ವಾರ್ಷಿಕೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.jk

ನಗರದ ಖಾಸಗಿ ರೆಸಾರ್ಟ್‌ನಲ್ಲಿ  ಇಂದು ಸಂಜೆ 6.30ಕ್ಕೆ’ಯು ಡಿಜಿಟಲ್’ ಕೇಬಲ್ ನೆಟ್‌ವರ್ಕ್‌ ನ ಪ್ರಥಮ ವಾರ್ಷಿಕೋತ್ಸವ   ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್. ರಂಗನಾಥ್ ಉದ್ಘಾಟಿಸಲಿದ್ದಾರೆ.  ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ನ್ಯೂಸ್ ಫಸ್ಟ್ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.mysore-U Digital –Anniversary- Countdown -Ceremony

ಕಾರ್ಯಕ್ರಮದಲ್ಲಿ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ, ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್, ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಎ.ಮಲ್ಲೇಶ್, ಕೆ.ಆರ್.ಆಸ್ಪತ್ರೆ ವೈದ್ಯಾಧಿಕಾರಿ ಯೋಗೀಶ್, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಸಂತೃಪ್ತ, ಕೇಬಲ್ ಆಪರೇಟರ್ ಸುಂದರಂ ಬಸಪ್ಪ ಹಾಗೂ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ.

Key words: mysore-U Digital –Anniversary- Countdown -Ceremony