ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು.

ಮೈಸೂರು,ಆಗಸ್ಟ್.24,2021(www.justkannada.in): ಕೆರೆಯಲ್ಲಿ ದನ‌‌ ತೊಳೆಯಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ತರಿಕಲ್‌ ಗ್ರಾಮದ ಬಾಲ ಕೆರೆಯಲ್ಲಿ ಈ ಘಟನೆ ನಡೆದಿದೆ. ದರ್ಶನ್ (21) ರಂಜಿತ್ (19) ಮೃತಪಟ್ಟ ಯುವಕರು. ಇಬ್ಬರು ಹಸುವಿಕ ಕಾವಲು ಗ್ರಾಮದ ನಿವಾಸಿಗಳಾಗಿದ್ದು, ದರ್ಶನ್ ಹಗ್ಗ ಹಿಡಿದುಕೊಂಡು ದನ ತೊಳೆಯುತ್ತಿದ್ದನು. ಈ‌ ವೇಳೆ ಹಗ್ಗದ ಸಮೇತ ದನ ನೀರಿಗೆ ಎಳೆದೊಯ್ತಿತ್ತು.

ಈ ಸಮಯದಲ್ಲಿ ಈಜು ಬಾರದ ದರ್ಶನ್ ರಕ್ಷಿಸಲು ರಕ್ಷಿತ್ ಮುಂದಾಗಿದ್ದು, ಆದರೆ ಇಬ್ಬರೂ ಸಹ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- Two youth -drowned – lake-death