ನಕಲಿ ಆರ್ ಟಿಪಿಸಿಆರ್ ಬಳಸಿ ರಾಜ್ಯ ಪ್ರವೇಶಕ್ಕೆ ಪ್ರಯತ್ನ: ಮೂವರು ವಶಕ್ಕೆ.

ಮೈಸೂರು,ಆಗಸ್ಟ್, 24,2021(www.justkannada.in): ನಕಲಿ ಆರ್ ಟಿಪಿಸಿಆರ್ ಬಳಸಿ ರಾಜ್ಯ ಪ್ರವೇಶಿಸಲು ಪ್ರಯತ್ನಿಸಿದ್ಧ ಮೂವರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹೆಚ್ ಡಿ ಕೋಟೆ ತಾಲ್ಲೂಕು ಬಾವಲಿ ಚೆಕ್ ಪೋಸ್ಟ್‌ನಲ್ಲಿ ಮೂವರನ್ನ ವಶಕ್ಕೆ ಪಡೆಯಲಾಗಿದ್ದು, ಜಬೀರ್, ಷರೀಫ್, ರಂಜಿತ್ ಬಂಧಿತ ಆರೋಪಿಗಳು. ಮೂವರು ವಯನಾಡಿನ ವೇಲುಮುಂಡ ನಗರದವರು ಎನ್ನಲಾಗಿದೆ. ಜಬೀರ್ ಷರೀಫ್ ನಕಲಿ ವರದಿ ತಂದಿದ್ದರು. ರಂಜಿತ್ ನಕಲಿ ಆರ್ ಟಿಪಿಸಿಆರ್ ವರದಿ ತಯಾರಿಸಿ ಕೊಟ್ಟಿದ್ದ.ganja peddlers arrested by mysore police

ಈ ನಡುವೆ ಮೂವರು ನಕಲಿ ವರದಿ ತಂದಿರುವುದನ್ನು ರಾಜ್ಯದ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅಧಿಕಾರಿ ಮಂಜುನಾಥ್ ಹಾಗೂ ಆರೋಗ್ಯ ಇಲಾಖೆ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Entry -attempt – state – fake -RTPCR-Three –arrest-mysore