Thursday, September 17, 2026

BDA Apartments

ಹಳೇ ದ್ವೇಷ, ವೈಷಮ್ಯದ ಹಿನ್ನಲೆ: ಇಬ್ಬರಿಗೆ ಚಾಕು ಇರಿತ: ಓರ್ವ ಸಾವು BDA JK_Adv BDA Adv
Home Crime ಹಳೇ ದ್ವೇಷ, ವೈಷಮ್ಯದ ಹಿನ್ನಲೆ: ಇಬ್ಬರಿಗೆ ಚಾಕು ಇರಿತ: ಓರ್ವ ಸಾವು.

ಹಳೇ ದ್ವೇಷ, ವೈಷಮ್ಯದ ಹಿನ್ನಲೆ: ಇಬ್ಬರಿಗೆ ಚಾಕು ಇರಿತ: ಓರ್ವ ಸಾವು.

ಮೈಸೂರು,ಸೆಪ್ಟಂಬರ್,1,2022(www.justkannada.in):  ಹಳೇ ದ್ವೇಷ, ವೈಷಮ್ಯದ ಹಿನ್ನಲೆ, ದುಷ್ಕರ್ಮಿಗಳು ಇಬ್ಬರಿಗೆ ಚಾಕು ಇರಿದಿದ್ದು ಈ ವೇಳೆ  ಓರ್ವ ಸಾವನ್ನಪ್ಪಿ ,ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಂ.ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೆಂಕಟೇಶ್  ಅಲಿಯಾಸ್ ಕರಿಯ ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ನವೀನ್ ಸ್ಥಿತಿ ಗಂಭೀರವಾಗಿದೆ.

ಚಂದ್ರು@ಚಿಕನ್ ಚಂದ್ರು ಮತ್ತು ಶೆಟ್ಟಿ ಎಂಬ ಆರೋಪಿಗಳೇ ಚಾಕು ಇರಿದಿದ್ದು,  ಆರೋಪಿಗಳು ಎಸ್ಕೇಪ್ ಆಗಿದ್ದಾರೆ.  ಕೆ.ಎಂ.ಹಳ್ಳಿ ಅಶ್ವತ್ಥಕಟ್ಟೆ ಬಳಿ ನವೀನ್ ಹಾಗೂ ವೆಂಕಟೇಶ್ ರಾತ್ರಿ ಮಾತನಾಡುತ್ತ ನಿಂತಿದ್ದಾಗ ಅಲ್ಲಿಗೆ ಬಂದ ಚಂದ್ರು ಹಾಗೂ ಶೆಟ್ಟಿ ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾರೆ. ಈ ವೇಳೆ ಶೆಟ್ಟಿ ಎಂಬಾತ ವೆಂಕಟೇಶ್ ಗೆ ಚಾಕುವಿನಿಂದ ಇರಿದಿದ್ದಾನೆ.

ವೆಂಕಟೇಶ್ ಸಹಾಯಕ್ಕೆ ಬಂದ ನವೀನ್ ಗೂ  ಚಾಕು ಹಾಕಿದ್ದು ತೀವ್ರ ಗಾಯಗೊಂಡ ಇಬ್ಬರನ್ನ  ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಸಾವನ್ನಪ್ಪಿದ್ದು ನವೀನ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Two –stabbed-death.