ಟಾಟಾ ಎಜುಕೇಷನ್ ಟ್ರಸ್ಟ್ ನಿಂದ ಜೆಎಸ್ ಎಸ್ ಆಸ್ಪತ್ರೆಗೆ ವೈದ್ಯಕೀಯ ಪರಿಕರಗಳ ಹಸ್ತಾಂತರ: ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಭಾಗಿ…

ಮೈಸೂರು, ಅಕ್ಟೋಬರ್,5,2020(www.justkannada.in): ಜೆಎಸ್ ಎಸ್ ಆಸ್ಪತ್ರೆಗೆ 51 ಲಕ್ಷ ಮೊತ್ತದ ಕೋವಿಡ್ ಗೆ ಸಂಬಂಧಿಸಿದ ವೈದ್ಯಕೀಯ ಸಲಕರಣೆಗಳನ್ನು ಟಾಟಾ ಎಜುಕೇಷನ್ ಟ್ರಸ್ಟ್ ಉಚಿತವಾಗಿ  ನೀಡಿದ್ದು ಇಂದು ವೈದ್ಯಕೀಯ ಪರಿಕರಗಳನ್ನ ಹಸ್ತಾಂತರಿಸಲಾಯಿತು.

ಟಾಟಾ ಎಜುಕೇಷನ್ ಟ್ರಸ್ಟ್ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳ ಉಪಸ್ಥಿತಿಯಲ್ಲಿ ವೈದ್ಯಕೀಯ ಪರಿಕರಗಳನ್ನು ಹಸ್ತಾಂತರಿಸಿದೆ. ಲಯನ್ಸ್ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.  ಜೆಎಸ್ಎಸ್ ಆಸ್ಪತ್ರೆಗೆ ಕೋವಿಡ್ 19 ಚಿಕಿತ್ಸೆಗೆ ಸಂಬಂಧಪಟ್ಟ ವೈದ್ಯಕೀಯ ಪರಿಕರಗಳು ಇವಾಗಿವೆ.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭಾಗಿಯಾಗಿ ಕೋವಿಡ್ -19 ಪರಿಸ್ಥಿತಿ, ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಟಾಟಾ ಎಜುಕೇಷನ್ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಜೆಎಸ್ಎಸ್ ಆಸ್ಪತ್ರೆ ವೈದ್ಯರು ಭಾಗಿಯಾಗಿದ್ದರು.mysore-transfer-medical-equipment-tata-education-trust-jss-hospital-minister-sudhakar

ಕಾರ್ಯಕ್ರಮದಲ್ಲಿ ಮಾತನಾಡಿದ  ಸುತ್ತೂರು ಶ್ರೀಗಳು, ಟಾಟಾ ಸಂಸ್ಥೆ ಎಷ್ಟು ದೊಡ್ಡದಾಗಿ ಬೆಳೆದಿದೆಯೋ ಅಷ್ಟೇ ಮಾನವೀಯ ಕಾಳಜಿ, ಹೃದಯವಂತಿಕೆ ಹೊಂದಿರುವ ಸಂಸ್ಥೆ. ಕೋವಿಡ್ -19 ಪರಿಸ್ಥಿತಿ ನಿಯಂತ್ರಣಕ್ಕೆ ಟಾಟಾ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಟಾಟಾ ಸಂಸ್ಥೆ ಟಾಟಾ ಎಜುಕೇಷನ್ ಟ್ರಸ್ಟ್ ಮೂಲಕ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅತೀ ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಅತೀ ಹೆಚ್ಚಿನ ಪ್ರಕರಣಗಳನ್ನು ದಾಖಲಾಗುತ್ತಿದೆ ಎಂದರು.

ಯಾವಾಗಲೂ ಮಾಸ್ಕ್ ಧರಿಸುವುದು ಜನರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ತಮ್ಮ ಹಾಗೂ ಪರರ ಆರೋಗ್ಯ ದೃಷ್ಟಿಯಿಂದ ಈ ಪರಿಸ್ಥಿತಿಗೆ ಒಗ್ಗಿಕೊಳ್ಳುವುದು ಅನಿವಾರ್ಯ. ಸಾರ್ವಜನಿಕರು ಸರ್ಕಾರಕ್ಕೆ ಸಹಕರಿಸಿ ಸರ್ಕಾರ ನೀಡಿರುವ ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಾರ್ವಜನಿಕರಿಗೆ ಸುತ್ತೂರು ಶ್ರೀಗಳು ಕಿವಿಮಾತು ಹೇಳಿದರು.mysore-transfer-medical-equipment-tata-education-trust-jss-hospital-minister-sudhakar

ಮೈಸೂರು ದಸರಾ ಆಚರಣೆ ಕುರಿತು ಪ್ರತಿಕ್ರಿಯಿಸಿದ ಸುತ್ತೂರು ಶ್ರೀಗಳು, ಇನ್ನು ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ಮುಂದಾಗಿದೆ. ಜನರು ಕೂಡ ಸರ್ಕಾರಕ್ಕೆ ಸಹಕಾರ ನೀಡಬೇಕು. ದಸರಾದಲ್ಲಿ ಯಾವ ರೀತಿಯಲ್ಲೂ ಕೋವಿಡ್ ಹೆಚ್ಚಾಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ನಮ್ಮ ಸಲಹೆಗಳನ್ನು ಕೊಟ್ಟಿದ್ದೇವೆ ಎಂದರು.

Key words: mysore-Transfer – Medical Equipment – Tata Education Trust -JSS Hospital-Minister -Sudhakar