Monday, August 24, 2026

BDA Apartments

Home Front Page ಡಿಕೆಶಿಗೆ ಸಿಬಿಐ ದಾಳಿಯನ್ನು ಎದುರಿಸಿ ಗೆದ್ದು ಬರುವುದು ಗೊತ್ತು :ಎಂಎಲ್ ಸಿ ಎಚ್.ವಿಶ್ವನಾಥ್

ಡಿಕೆಶಿಗೆ ಸಿಬಿಐ ದಾಳಿಯನ್ನು ಎದುರಿಸಿ ಗೆದ್ದು ಬರುವುದು ಗೊತ್ತು :ಎಂಎಲ್ ಸಿ ಎಚ್.ವಿಶ್ವನಾಥ್

ಮೈಸೂರು,ಅಕ್ಟೊಂಬರ್,05,2020(www.justkannada.in) : ಡಿಕೆಶಿಗೆ ಸಿಬಿಐ ದಾಳಿಯನ್ನು ಎದುರಿಸಿ ಗೆದ್ದು ಬರುವುದು ಗೊತ್ತು. ಅವರಿಗೆ ಆ ಶಕ್ತಿಯಿದೆ. ಇವೆಲ್ಲ ದಾಳಿಗಳು ಒಂದು ರೀತಿಯಲ್ಲಿ ಸಹಜ. ಇವುಗಳನ್ನು ರಾಜಕೀಯ ದಾಳಿ ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ ಎಂದು ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಹೇಳಿದರು.jk-logo-justkannada-logoಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಅವರೊಂದಿಗೆ ನಾನು ತುಂಬಾ ವರ್ಷ ಜೊತೆ ಇದ್ದವನು. ಹೀಗಾಗಿ, ಈ ಮಾತು ಹೇಳುತ್ತಿದ್ದೇನೆ. ದಾಳಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೆಲ್ಲ ಸತ್ಯವಲ್ಲ. ಇವೆಲ್ಲವು ಒಂದೊಂದು ರೀತಿ ಸಹಜ ಪ್ರಕ್ರಿಯೆ ಎಂದರು.D.K.shi-knows-CBI-attack-won-A.H.Vishwanath

 

ಮುನಿರತ್ನರಿಗೆ ಟಿಕೆಟ್ ಸಿಗಲೆ ಬೇಕು

ಆರ್.ಆರ್.ನಗರ ಟಿಕೆಟ್ ವಿಚಾರ. ರಾಜ್ಯ ಬಿಜೆಪಿಯಿಂದ ಎರಡು ಹೆಸರು ಶಿಫಾರಸು ಮಾಡಿದ್ದೆ ತಪ್ಪು. ಮುನಿರತ್ನ ಒಬ್ಬರ ಹೆಸರನ್ನೆ ಕಳುಹಿಸಬೇಕಿತ್ತು. ಅವರು ಬಂದಿದ್ದರಿಂದಲೆ ತಾನೇ ಸರ್ಕಾರ ಬಂದಿದ್ದು. ಸರ್ಕಾರ ಬರಲು ಅವರ ಸಹಾಯವು ಇದೆ ಇದನ್ನು ಯಾರು ಮರೆಯಬಾರದಿತ್ತು ಎಂದು ಮುನಿರತ್ನ ಪರ ಬ್ಯಾಟ್ ಬೀಸಿದರು.

ಮುನಿರತ್ನರಿಗೆ ಟಿಕೆಟ್ ಸಿಗಲೆ ಬೇಕು ಇದು ನಮ್ಮ ಆಗ್ರಹ. ಪಕ್ಷದ ಒಳಗಡೆ ನೀವು ಏನಾದರು ಚರ್ಚೆ ಮಾಡಿಕೊಳ್ಳಿ, ಅದು ನಮಗೆ ಗೊತ್ತಿಲ್ಲ. ಆದರೆ, ಮುನಿರತ್ನರಿಗೆ ಟಿಕೆಟ್ ಪೈನಲ್ ಆಗಲೆಬೇಕು. ಮುನಿರತ್ನ ಆ ಕ್ಷೇತ್ರದ ಜನಪ್ರಿಯ ಶಾಸಕ. ಅವರು ಆ ಕ್ಷೇತ್ರದಲ್ಲಿ ಗೆದ್ದೆ ಗೆಲ್ಲುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿಶ್ವಾಸವ್ಯಕ್ತಪಡಿಸಿದರು.

key words : D.K.shi-knows-CBI-attack-won-A.H.Vishwanath