Tuesday, August 25, 2026

BDA Apartments

Home Front Page ಅಖಿಲ ಭಾರತ ವಿವಿ ಮಟ್ಟದ ಜಿಮ್ನಾಸ್ಟಿಕ್‌ ಸ್ಪರ್ಧೆ: ಮೈಸೂರಿನ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆ

ಅಖಿಲ ಭಾರತ ವಿವಿ ಮಟ್ಟದ ಜಿಮ್ನಾಸ್ಟಿಕ್‌ ಸ್ಪರ್ಧೆ: ಮೈಸೂರಿನ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆ

ಮೈಸೂರು,ನವೆಂಬರ್,5,2024 (www.justkannada.in):  ನಗರದಲ್ಲಿ ನಡೆದ ಮೈಸೂರು ವಿಶ್ವ ವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಜಿಮ್ನಾಸ್ಟಿಕ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರು ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೈಸೂರಿನ ಜೆ.ಪಿ.ನಗರದ ಸ್ಪಾರ್ಕ್‌ ಜಿಮ್ನಾಸ್ಟಿಕ್‌ ತರಬೇತಿ ಶಾಲೆಯ ವಿದ್ಯಾಶ್ರಮ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಪ್ರಣತಿ ಟೇಬಲ್‌ ವೋಲ್ಟ್ ಹಾಗೂ ಫ್ಲೋರ್‌ ಎಕ್ಸಸೈಜ್‌ ಸ್ಪರ್ಧೆಯಲ್ಲಿ ಚಿನ್ನ, ಅನಿವಾನ್‌ ಬಾರ್‌ರ‍ಸನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಹಾಗೆಯೇ ವಿದ್ಯಾವರ್ಧಕ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಪ್ರಗ್ನಾ ಗೌಡ ಅನ್‌ ಇವನ್‌ ಬಾರ್‌ ರ‍ಸ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಟೇಬಲ್‌ ವೋಲ್ಟ್  ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಇಬ್ಬರು ಅಖಿಲ ಭಾರತ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು ನಗರದ ಜೆ.ಪಿ.ನಗರದಲ್ಲಿರುವ ಸ್ಪಾರ್ಕ್‌ ಜಿಮ್ನಾಸ್ಟಿಕ್‌ ಅಕಾಡೆಮಿಯ ಮುಖ್ಯ ತರಬೇತುದಾರ ರಾಘವೇಂದ್ರ ಅರಳಿಕಟ್ಟೆ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Key words: mysore, students, All India University Level, Gymnastics, Competition