Sunday, August 23, 2026

BDA Apartments

Home Crime ಮೈಸೂರು: ರಾಮ್ ಶ್ರೀ ಪೇಪರ್ ಕಾರ್ಖಾನೆಗೆ ಬಾಂಬ್ ಬೆದರಿಕೆ ಕರೆ…

ಮೈಸೂರು: ರಾಮ್ ಶ್ರೀ ಪೇಪರ್ ಕಾರ್ಖಾನೆಗೆ ಬಾಂಬ್ ಬೆದರಿಕೆ ಕರೆ…

ಮೈಸೂರು,ಫೆ,29,2020(www.justkannada.in): ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ ಶ್ರೀ ಪೇಪರ್ ಕಾರ್ಖಾನೆಗೆ ಅನಾಮಧೇಯ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಕರೆ ಮಾಡಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ ಶ್ರೀ ಪೇಪರ್ ಕಾರ್ಖಾನೆ ಮಾಲೀಕರಿಗೆ ಅನಾಮಧೇಯ ವ್ಯಕ್ತಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಇನ್ನು ಬಾಂಬ್ ಬೆದರಿಕೆ ಕರೆ ಹಿನ್ನೆಲೆ ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಆತಂಕದಿಂದ ಹೊರ ಬಂದಿದ್ದಾರೆ.

ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಶ್ವಾನದಳ ಬಾಂಬ್ ಪತ್ತೆದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳಕ್ಕೆ ನಂಜನಗೂಡು ಪೊಲೀಸರು ಭೇಟಿ ನೀಡಿದ್ದು ಕರೆ ಮಾಡಿದ್ದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

Key words: Mysore-sri Ram Paper Factory – bomb- threat