ಅಕಾಲಿಕ ಮರಣ ಹೊಂದಿದ ನಾಲ್ವರು ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ….

ಬೆಂಗಳೂರು,ಫೆ,29,2020(www.justkannada.in):  ಅಕಾಲಿಕ ಮರಣಹೊಂದಿದ ನಾಲ್ವರು ಪತ್ರಕರ್ತರ ಕುಟುಂಬಕ್ಕೆ ರಾಜ್ಯ ಸರ್ಕಾರ ನೆರವು ನೀಡಿದೆ.

ಅಕಾಲಿಕ ಮರಣ ಹೊಂದಿದ ನಾಲ್ವರು ಪತ್ರಕರ್ತರ ಕುಟುಂಬಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಪರಿಹಾರ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ನಿಧನರಾದ ಪತ್ರಕರ್ತರಾದ ಗಜಾನನ ಹೆಗಡೆ, ಬಿ.ಆರ್ ರೋಹಿತ್, ರವಿರಾಜ ವಳಲಂಬೆ, ದಿಗಂಬರ ಗರುಡ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರವನ್ನ ಸಿಎಂ ಬಿಎಸ್ ಯಡಿಯೂರಪ್ಪ  ಘೋಷಣೆ ಮಾಡಿದ್ದಾರೆ.

ಪತ್ರಕರ್ತರ ನಿಯೋಗ ಸಿಎಂರನ್ನು ಭೇಟಿ ಮಾಡಿ ಪರಿಹಾರ ನೀಡುವಂತೆ ಮನವಿಯನ್ನು ಸಲ್ಲಿಸಿತ್ತು. ಪತ್ರಕರ್ತರ ಮನವಿ ಮೇರೆಗೆ ಸಿಎಂ ಯಡಿಯೂರಪ್ಪ ಶನಿವಾರ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ ಪತ್ರಕರ್ತರ ಜತೆ ಸದಾ ನಾವು ಇರುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

Key words: CM BS yeddyurappa- announces- Rs 5 lakh -compensation  -died –journalists- family