ನ.29 ರಂದು ನಡೆಯಬೇಕಿದ್ದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಷಷ್ಠಿ ಮಹೋತ್ಸವ ರದ್ಧು.

ಮೈಸೂರು,ನವೆಂಬರ್,25,2022(www.justkannada.in): ಮೈಸೂರು ತಾಲ್ಲೂಕು ಕಸಬಾ ಹೋಬಳಿ ಸಿದ್ಧಲಿಂಗಪುರ ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ವರ್ಷ ಷಷ್ಠಿ ಮಹೋತ್ಸವ ಆಚರಣೆಯನ್ನ ರದ್ದು ಮಾಡಲಾಗಿದೆ.

ಮೈಸೂರು- ಬೆಂಗಳೂರು‌ ಹೆದ್ದಾರಿಯಲ್ಲಿ ಪ್ರತಿ‌ವರ್ಷ ವಿಜೃಂಭಣೆಯಿಂದ ಈ ಇತಿಹಾಸ ಪ್ರಸಿದ್ಧ ಷಷ್ಠಿ ಮಹೋತ್ಸವ  ಜಾತ್ರೆ ನಡೆಯುತ್ತಿತ್ತು. ಆದರೆ ದೇವಾಲಯದ ಪುನರ್ ನಿರ್ಮಾಣ ಕಾರ್ಯ‌ ಹಿನ್ನೆಲೆ  ನವೆಂಬರ್ 29 ರಂದು ನಡೆಯಬೇಕಿದ್ದ ಷಷ್ಠಿ ಮಹೋತ್ಸವವನ್ನ ರದ್ದು ಮಾಡಿ ಮೈಸೂರು ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ದೇವಸ್ಥಾನದ ಸಂಪ್ರದಾಯದಂತೆ ದೇಗುಲದ ಒಳಗೆ ಮಾತ್ರ  ಷಷ್ಠಿ ಆಚರಣೆ ಮಾಡಲಿದ್ದು, ಸಾರ್ವಜನಿಕರಿಗೆ ಯಾವುದೇ ಪ್ರವೇಶವಿರುವುದಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ನಿಂದಾಗಿ ಷಷ್ಠಿ ಆಚರಣೆ ಆಗಿರಲಿಲ್ಲ ಈ ವರ್ಷ ರಸ್ತೆ ಅಗಲೀಕರಣ ನೆಪದಲ್ಲಿ ದೇವಸ್ಥಾನ ಸ್ಥಳಾಂತರ, ದೇವಸ್ಥಾನ ಪುನರ್ ನಿರ್ಮಾಣ ಹಿನ್ನೆಲೆ  ಷಷ್ಠಿ ಮಹೋತ್ಸವನ್ನ ರದ್ದು ಮಾಡಲಾಗಿದೆ.

Key words: mysore-Shashti Mahotsava -Sri Subrahmanyeshwar Swamy -Temple — cancelled.