ಮಂಗಳೂರು ಬಾಂಬ್ ಸ್ಪೋಟ ಪ್ರಕರಣ: ಸರ್ಕಾರ ಮೃದು ಧೋರಣೆ ತಾಳಿಲ್ಲ- ಸಚಿವ ಸುನೀಲ್ ಕುಮಾರ್.

ಮಂಗಳೂರು,ನವೆಂಬರ್,25,2022(www.justkannada.in):  ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಕೃತ್ಯವನ್ನ ಖಂಡಿಸುತ್ತೇನೆ. ಈ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ತಾಳಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟದ  ಸ್ಥಳ ನಾಗುರಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಸಚಿವರಿಗೆ  ಜಿಲ್ಲಾಧಿಕಾರಿ ರವಿಕುಮಾರ್ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ಪ್ರಕರಣದ ತನಿಖೆಯನ್ನ ಎನ್ ಐಎಗೆ ಹಸ್ತಾಂತರ ಮಾಡಲಾಗಿದೆ.  ಕೃತ್ಯದ ಹಿಂದೆ ಯಾರಿದ್ದಾರೆ ಅಂತಾ ಗೊತ್ತಾಬೇಕು. ಪಿಎಫ್ ಐ ಬ್ಯಾನ್ ಬಳಿಕ ಇಂತಹ ಘಟನೆಗೆ ಕಡಿವಾಣ ಬಿದ್ದಿದೆ.  ಈ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ತಾಳಲ್ಲ.  ಮಂಗಳೂರು ಸ್ಪೋಟದ ಹಿಂದೆ ಅಂತರಾಷ್ಟ್ರೀಯ  ಕೈವಾಡವಿದೆ. ಮಂಗಳೂರಿನಲ್ಲಿ ಇಂದಲ್ಲ ನಾಳೆ  ಎನ್ ಐಎ ಘಟಕ ಸ್ಥಾಪನೆ ಮಾಡಲಾಗುತ್ತದೆ. ಆಟೋಚಾಲಕನ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ ಎಂದರು.

Key words: Mangalore -Bomb Blast- Case- Minister- Sunil Kumar.