ಮರಾಠಿಗರಿಂದ ಮತ್ತೆ ಖ್ಯಾತೆ: ಕರ್ನಾಟಕದ ಬಸ್ ಗೆ ಮಸಿ ಬಳಿದು ಪುಂಡಾಟಿಕೆ.

kannada t-shirts

ಔರಂಗಾಬಾದ್,ನವೆಂಬರ್,25,2022(www.justkannada.in):  ಮರಾಠಿಗರು ಮತ್ತೆ ಖ್ಯಾತೆ ತೆಗೆದಿದ್ದು, ಕರ್ನಾಟಕಕ್ಕೆ ಸೇರಿದ ಬಸ್ ಮೇಲೆ ಕಪ್ಪು ಮಸಿ ಬಳಿದು ಪುಂಡಾಟಿಕೆ ಪ್ರದರ್ಶಿಸಿದ್ದಾರೆ.

ಮಹಾರಾಷ್ಟ್ರ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಅಖಿಲ ಭಾರತ ಮರಾಠಾ ಸಂಘದ ಕಾರ್ಯಕರ್ತರು ಪುಂಡಾಟಿಕೆ ಪ್ರರ್ದಶಿಸಿದ್ದಾರೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (NWKRTC) ನಿಪ್ಪಾಣಿ ಡಿಪೋಗೆ ಸೇರಿದ ಬಸ್ ಅನ್ನು  ಗ್ರಾಮದಲ್ಲಿ ಅಡ್ಡಗಟ್ಟಿದ್ದು, ನಂತರ  ವಾಹನದ ಮೇಲೆ ಜೈ ಮಹಾರಾಷ್ಟ್ರ ಅಂತೆಲ್ಲ ಕಪ್ಪು ಮಸಿಯಿಂದ ಬರೆದಿದ್ದಾರೆ ಎನ್ನಲಾಗಿದೆ.

ಮರಾಠಿಗರ ಖ್ಯಾತೆ ದಿನೇ ದಿನೇ ಹೆಚ್ಚುತ್ತಿದ್ದು ಪುಂಡಾಟಿಕೆ  ಮೆರೆಯುವವರಿಗೆ ತಕ್ಕ ಪಾಠ ಕಲಿಸಬೇಕಿದೆ.

Key words: Marathi- bus- black ink-Karnataka.

website developers in mysore