ಮೈಸೂರು: ಸೋಮವಾರದಿಂದ  ಶಾಲೆ ಆರಂಭ.

ಮೈಸೂರು,ಜನವರಿ,22,2022(www.justkannada.in):  ಸೋಮವಾರದಿಂದ ಮೈಸೂರಿನಲ್ಲಿ ಶಾಲೆಗಳನ್ನ ಎಂದಿನಂತೆ ಆರಂಭಿಸಲು ಆದೇಶ ಹೊರಡಿಸಲಾಗಿದೆ.

ದಿನಾಂಕ 24 ರಿಂದ ಮೈಸೂರಿನಲ್ಲಿ ಶಾಲೆಗಳು ಪುನರಾರಂಭವಾಗಲಿದ್ದು, ಈ ಕುರಿತು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು, ವಸತಿ ಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳೆಲ್ಲವೂ ಓಪನ್ ಆಗಲಿವೆ.

ಕೋವಿಡ್ ಮುಂಜಾಗ್ರತಾ ಕ್ರಮಗಳನ್ನ ಪಾಲಿಸಿ, ಭೌತಿಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ.

Key words:Mysore-School -starts- Monday.