ಸಾಲ ತೀರಿಸಲು ಬ್ಯಾಂಕ್ ಗೆ ಕನ್ನ ಹಾಕಿ ಹಣ, ಚಿನ್ನಾಭರಣ ದೋಚಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಅಂದರ್.

ಬೆಂಗಳೂರು,ಜನವರಿ,22,2022(www.justkannada.in):  ತಾನು ಮಾಡಿದ ಸಾಲ ತೀರಿಸಲು ಬ್ಯಾಂಕ್ ಗೆ ಕನ್ನಹಾಕಿ ಹಣ ಚಿನ್ನಾಭರಣ ದೋಚಿದ್ಧ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನ  ಪೊಲೀಸರು ಬಂಧಿಸಿದ್ದಾರೆ.

ಇಂಜಿನಿಯರಿಂಗ್ ವಿದ್ಯಾರ್ಥಿ ಧೀರಜ್ ಬಂಧಿತ ಆರೋಪಿ. ಈತ ಆನ್ ಲೈನ್ ಆ್ಯಪ್ ಮೂಲಕ ಲೋನ್ ಪಡೆದಿದ್ದನಂತೆ.  ಧೀರಜ್ ಸುಮಾರು 40 ಲಕ್ಷ ರೂ. ಸಾಲ ಮಾಡಿದ್ದನಂತೆ. ಸಾಲಗಾರರ ಕಾಟ ತಾಳಲಾರದೆ ಈ ಸಾಲವನ್ನ ತೀರಿಸುವ ಸಲುವಾಗಿ ಈತ ದರೋಡೆಗಿಳಿದಿದ್ದಾನೆ.25-kg-gold-cash-robbery-muthoot-finance-office

ನಗರದ ಬಿಟಿಎಂ ಲೇಔಟ್ ನ  ಎಸ್ ಬಿಐ ನಲ್ಲಿ ಬ್ಯಾಂಕ್ ಸಿಂಬ್ಬಂದಿಗೆ ಚಾಕು ತೋರಿಸಿ  ಸುಮಾರು 4 ಲಕ್ಷ ಕ್ಯಾಶ್ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಇದೀಗ ಆರೋಪಿ ಧೀರಜ್ ನನ್ನ ಬಂಧಿಸುವಲ್ಲಿ ಮಡಿವಾಳ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

Key words: bank-robbery-student-arrest