Tuesday, August 4, 2026

BDA Apartments

Home Cinema ಮೈಸೂರಿನ ಸರಸ್ವತಿ ಥಿಯೇಟರ್’ನಲ್ಲಿ ಇನ್ಮುಂದೆ ‘ಹೌಸ್ ಫುಲ್’ ಬೋರ್ಡ್ ಕಾಣಿಸಲ್ಲ!

ಮೈಸೂರಿನ ಸರಸ್ವತಿ ಥಿಯೇಟರ್’ನಲ್ಲಿ ಇನ್ಮುಂದೆ ‘ಹೌಸ್ ಫುಲ್’ ಬೋರ್ಡ್ ಕಾಣಿಸಲ್ಲ!

ಮೈಸೂರು, ಸೆಪ್ಟೆಂಬರ್ 21, 2021 (www.justkannada.in): ಕೋವಿಡ್ ಹಾಗೂ ಲಾಕ್ ಡೌನ್ ಪರಿಣಾಮ ನಗರದ ಮತ್ತೊಂದು ಚಿತ್ರಮಂದಿರ ಬಾಗಿಲು ಮುಚ್ಚಿದೆ.

ಸಾಕಷ್ಟು ವರ್ಷಗಳಿಂದ ಸಿನಿ ಪ್ರಿಯರಿಗೆ ಮನರಂಜನೆ ನೀಡುತ್ತಿದ್ದ ಮೈಸೂರಿನ ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರ ಪ್ರದರ್ಶನ ನಿಲ್ಲಿಸಲಿದೆ.

ಬಹುತೇಕ ಪುನೀತ್ ರಾಜ್ ಕುಮಾರ್ ಸಿನಿಮಾಗಳ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.

ಸಿನಿಮಾ ಪ್ರದರ್ಶನವಿಲ್ಲದ ಕಾರಣದಿಂದ ಥಿಯೇಟರ್ ಮಾಲೀಕರು ಬಾಗಿಲು ಮುಚ್ಚಲು ನಿರ್ಧರಿಸಿದ್ದಾರೆ. ಕೊರೊನಾ ಸೋಂಕು ಹಾಗೂ ಲಾಕ್ ಡೌನ್ ನಿಂದಾಗಿ ನಷ್ಟಕ್ಕೊಳಗಾಗಿರುವ ಸರಸ್ವತಿ ಥಿಯೇಟರ್ ಮಾಲೀಕರು ಇದನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಕಳೆದ ಒಂದು ವರ್ಷ ಅವಧಿಯಲ್ಲಿ ಮೈಸೂರಿನ ಮೂರು ಪ್ರತಿಷ್ಠಿತ ಚಿತ್ರಮಂದಿರಗಳು ಬಂದ್ ಆಗಿವೆ. ಬಹು ವಿಶಾಲವಾದ ದೊಡ್ಡ ಚಿತ್ರಮಂದಿರ ಎಂದೇ ಪ್ರಸಿದ್ಧ ವಾಗಿದ್ದ ಸರಸ್ವತಿ ಚಿತ್ರಮಂದಿರಕ್ಕೂ ಲಾಕ್ ಡೌನ್ ಬಿಸಿ ತಟ್ಟಿದೆ. ಶಾಂತಲಾ, ಲಕ್ಷ್ಮಿ ಚಿತ್ರಮಂದಿರ ಬಂದ್ ಬಳಿಕ ಇದೀಗ ಸರಸ್ವತಿ ಚಿತ್ರಮಂದಿರವೂ ಬಂದ್ ಆಗಲಿದೆ.

key words: mysore saraswathi theatre will shutdown