ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಹಾರಾಡಿದ ಅತಿ ಎತ್ತರದ ತ್ರಿವರ್ಣ ಧ್ವಜ…

ಮೈಸೂರು,ಆ,15,2019(www.justkannada.in):  ಇಂದು ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಬಹುದೊಡ್ಡ ತ್ರಿವರ್ಣಧ್ವಜ ಹಾರಾಡಿದೆ.

ನಗರದ ರೈಲ್ವೇ ನಿಲ್ದಾಣದಲ್ಲಿ ಅತೀ ಎತ್ತರದ ಭಾವುಟ ಹಾರಾಡಿದೆ.  ಬಹುದೊಡ್ಡ ಭಾವುಟ ಹಾರಿಸಿ ರೈಲ್ವೆ ಸಿಬ್ಬಂದಿ ಸಂಭ್ರಮಿಸಿದರು. ಫ್ಲಾಗ್ ಪೌಂಡೇಶೇಷನ್ ಆಪ್ ಇಂಡೀಯಾ ಹಾಗೂ ರೈಲ್ವೇ ಇಲಾಖೆ ಸಹೋಗದಲ್ಲಿ ಈ  ಭಾವುಟ ತಯಾರಿಸಲಾಗಿದ್ದು,  ಸುಮಾರು 10 ಲಕ್ಷ ಮೌಲ್ಯದಲ್ಲಿ ಧ್ವಜ ಕಂಬ ಮತ್ತು ಭಾವುಟ ತಯಾರಿಸಲಾಗಿದೆ.

ತ್ರಿವರ್ಣ ಧ್ವಜ ನೂರು ಅಡಿ ಎತ್ತರದ ಧ್ವಜಕಂಬ ಹಾಗೂ 20 x 30 ಉದ್ದ ಅಗಲದ ಧ್ವಜವನ್ನ ಹೊಂದಿದೆ.  ಇನ್ನು ಅತೀ ದೊಡ್ಡ ಭಾವುಟ ಹಾರಟಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ರೈಲ್ವೆ ವಿಭಾಗೀಯ ರೈಲ್ವೇ ವ್ಯವಾಸ್ಥಾಪಕರಾದ  ಅಪರ್ಣ ಹಾಗೂ ಇಲಾಖೆಯ ಸಿಬ್ಬಂದಿ ಸಾಕ್ಷಿಯಾದರು.

Key words: mysore- railway station -big- Indian-flag- hoisted