ಮುಡಾದಲ್ಲಿ ಕೋಟಿ ಕೋಟಿ ಅನುದಾನದ ಹಗರಣ ನಡೆದಿದೆ – ನಿವೃತ್ತ ಅಧಿಕಾರಿಯಿಂದ ಗಂಭೀರ ಆರೋಪ…

ಮೈಸೂರು,ಮೇ,21,2019(www.justkannada.in): ಕ್ರಿಯಾಯೋಜನೆ ಇಲ್ಲದೇ ಕಾಮಗಾರಿ ನಡೆಸುವ ಮೂಲಕ ಮುಡಾದಲ್ಲಿ ಕೋಟಿ ಕೋಟಿ ಅನುದಾನದ ಹಗರಣ ನಡೆದಿದೆ ಎಂದು ಮುಡಾದ ನಿವೃತ್ತ ಅಧಿಕಾರಿ ನಟರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಡಾ ಆಯುಕ್ತರ ವಿರುದ್ದ ಗಂಭೀರ ಆರೋಪ ಮಾಡಿದ ಮುಡಾದ ನಿವೃತ್ತ ಅಧಿಕಾರಿ ನಟರಾಜ್, 2018-19ನೇ ಸಾಲಿನಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ಪಡೆಯದೆ 7 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. 21 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಅನುದಾನದ ಒಪ್ಪಿಗೆ ಪಡೆಯದೇ ಕಾಮಗಾರಿ ನಡೆಸಲಾಗಿದೆ. ಆರು ತಿಂಗಳಲ್ಲಿ 27 ಕೋಟಿ ರೂಗಳಿಗೂ ಹೆಚ್ಚಿನ ಬಿಲ್ ಪಾವತಿ ಮಾಡಲಾಗಿದೆ. ಇದಲ್ಲದೇ ಏ.೨೦೧೮ ರಿಂದ ಜೂ.2018 ವರೆಗೆ – ಜ.2019 ರಿಂದ ಮಾ.2019 ವರೆಗಿನ  ಮಾಹಿತಿಯನ್ನ ಮುಡಾ ನೀಡಿಲ್ಲ. ಹೀಗಾಗಿ ಮುಡಾದಲ್ಲಿ 80 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಈ ಹಗರಣದ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸುವಂತೆ ನಟರಾಜ್ ಒತ್ತಾಯಿಸಿದ್ದಾರೆ. ಮುಡಾ ವ್ಯಾಪ್ತಿಗೆ ಬಾರದ ಪ್ರದೇಶಗಳಲ್ಲಿ ಮುಡಾ ಕಾಮಗಾರಿ ನಡೆಸುತ್ತಿದ್ಯಾ ಎಂದು ಮುಡಾ ನಡೆಯ ಬಗ್ಗೆ ನಟರಾಜು ಅನುಮಾನ ವ್ಯಕ್ತಪಡಿಸಿದ್ದಾರೆ.

Key words: The 80 crore scandal in muda Serious accusation by retired officer