ಸಚಿವ ಡಾ.ಅಶ್ವಥ್ ನಾರಾಯಣ್ ದುಂಡಾವರ್ತನೆ ಖಂಡಿಸಿ ಮೈಸೂರಲ್ಲಿ ಪಾಲಿಕೆ ಸದಸ್ಯ ಲೊಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ.

ಮೈಸೂರು,ಜನವರಿ,5,2022(www.justkannada.in):  ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಂಸದ ಡಿ.ಕೆ.ಸುರೇಶ್ ಅವರ ಜತೆ  ಸಚಿವ ಡಾ.ಅಶ್ವಥ್ ನಾರಾಯಣ್ ಗೂಂಡಾ ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಪಾಲಿಕೆ ಸದಸ್ಯ ವಿ.ಲೊಕೇಶ್ ಪಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಬುಧವಾರ ಪ್ಲೆಕಾರ್ಡ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ  ಕಾಂಗ್ರೆಸ್ ಕಾರ್ಯಕರ್ತರು  ಬಿಜೆಪಿ ಸಚಿವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಲೊಕೇಶ್ ಪಿಯಾ, ನಾಡಿನ ಆರುವರೆ ಕೋಟಿ ಕನ್ನಡಿಗರ ನಾಯಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇದಿಕೆಯಲ್ಲಿರುವಾಗಲೇ, ಅವರ ಮಾತನ್ನು ಧಿಕ್ಕರಿಸಿ ಸಚಿವ ಡಾ.ಅಶ್ವಥ್ ನಾರಾಯಣ್ ಅವರು ದುರ್ವತನೆ ತೋರಿಸಿದ್ದು ಅಕ್ಷಮ್ಯ. ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ವೇಳೆ ರಾಜಕೀಯ ಸಲ್ಲದು. ಯಾವುದೇ ಪಕ್ಷ ಅಧಿಕಾರದಲ್ಲಿರಲಿ. ಅದು ಜನತೆಯ, ಸಾರ್ವಜನಿಕರ ಸೇವೆಗೆ ಮಾತ್ರ ಇರುವಂತದ್ದೇ ಹೊರತು ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅಲ್ಲ. ಈ ಸತ್ಯದ ಅರಿವಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಆದಿಯಾಗಿ ವೇದಿಕೆಯಲ್ಲಿದ್ದ ಗಣ್ಯರು, ಸಚಿವ ಅಶ್ವಥ್ ನಾರಾಯಣ್ ಅವರನ್ನು ಶಾಂತರನ್ನಾಗಿಸಲು ಯತ್ನಿಸಿದ್ದು.

ಆದರೆ ಕೊಳಕು ಮನಸ್ಸಿನ ಸಚಿವ ಡಾ.ಅಶ್ವಥ್ ನಾರಾಯಣ್, ವಿನಾಕರಣ ವೇದಿಕೆಯಲ್ಲಿ ರಾಜಕೀಯ ಬೆರಸಿದರು. ಆ ಮೂಲಕ ಸಭಾ ಮರ್ಯಾಧೆಯನ್ನೇ ಹಾಳುಗೆಡವಿದರು. ಇಷ್ಟೆಲ್ಲಾ ಅವಾಂತರ ಮಾಡಿದ ಸಚಿವರ ದುರ್ನಡತೆಯನ್ನು ಸಂಸದರಾದ ಡಿ.ಕೆ.ಸುರೇಶ್ ಅವರು  ವೇದಿಕೆಯಲ್ಲಿ ಪ್ರಶ್ನಿಸಿದ್ದು ಸಮಂಜಸವಾಗಿಯೇ ಇದೆ.

ತಾವೊಬ್ಬ ಸಚಿವರು ಎಂಬುದನ್ನು ಮರೆತು  ಡಾ.ಅಶ್ವಥ್ ನಾರಾಯಣ್ ಅವರ ವರ್ತನೆ ಖಂಡನೀಯ. ವೇದಿಕೆಯಲ್ಲೇ ಗಂಡಸ್ತನದ ಪ್ರಸ್ತಾಪ ಮಾಡುವ ಮೂಲಕ ವೇದಿಕೆಯಲ್ಲಿದ್ದ ಗಣ್ಯರು ಮುಜುಗರ ಪಡುವಂತೆ ಮಾಡಿದರು. ಈ ಕೂಡಲೇ ಡಾ.ಅಶ್ವಥ್ ನಾರಾಯಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಎಂದು ಕಾರ್ಪೊರೇಟರ್ ಲೋಕೇಶ್ ಪಿಯಾ ಆಗ್ರಹಿಸಿದರು.

Key words: Mysore-protests – Lokesh Piya