ಗುಂಡ್ಲುಪೇಟೆ ಬಳಿ ಕಾರು-ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ: ಚಾಲಕ ಸಜೀವ ದಹನ

ಗುಂಡ್ಲುಪೇಟೆ, ಜುಲೈ 02, 2023 (www.justkannada.in): ಕಾರು ಮತ್ತು ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚಾಲಕ ಮೃತಪಟ್ಟಿದ್ದಾನೆ.

ಡಿಕ್ಕಿ ರಭಸಕ್ಕೆ ಕಾರು ಹೊತ್ತಿ ಉರಿದಿದೆ. ಈ ವೇಳೆ ಕಾರು ಚಾಲಕ ಹೊರ ಬರಲಾರದೆ ಸಜೀವ ದಹನವಾಗಿದ್ದಾನೆ. ಮೈಸೂರಿನ ಮುಜಾಮಿಲ್ ಅಹಮದ್(35) ಮೃತ ಚಾಲಕ.

ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ ಗೇಟ್ ಬಳಿ ಘಟನೆ ನಡೆದಿದೆ. ಮೈಸೂರು – ಕ್ಯಾಲಿಕಟ್ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ 10.45 ರ ಸುಮಾರಿಗೆ ಈ ಘಟನೆ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆ ಪಾರ್ವತಮ್ಮ ರಾಜ್‍ಕುಮಾರ್ ತಮ್ಮನ  ಪುತ್ರ ಸೂರಜ್ ಗೆ ಅಪಘಾತ ನಡೆದ ಸ್ಥಳದಲ್ಲೇ ಮತ್ತೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ಸಿಯಾದರು.

ಸ್ಥಳಕ್ಕೆ ಚಾಮರಾಜನಗರ ನಗರ ಎಸ್ಪಿ ಪದ್ಮಿನಿ ಸಾಹು ಭೇಟಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬೇಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.