ಕೇಂದ್ರದ ಬಳಿ 7.5 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಕ್ಕೆ ಕೊಡುತ್ತಿಲ್ಲ- ಸಚಿವ ಸಂತೋಷ್ ಲಾಡ್.

ಹುಬ್ಬಳ್ಳಿ,,ಜುಲೈ,1,2023(www.justkannada.in): ಕೇಂದ್ರದ ಬಳಿ 7.5 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಕ್ಕೆ ಕೊಡುತ್ತಿಲ್ಲ. ಅಕ್ಕಿ ಸಿಗುವವರೆಗೂ ಹಣ ನೀಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್,  ಅಕ್ಕಿ ಸಿಗುವ ತನಕ ಹಣ ನೀಡುತ್ತೇವೆ. ಡುದ್ದು ಕೊಡುತ್ತೇವೆ ಅಂದ್ರೆ ಬಿಜೆಪಿಯವರಿಗೆ ಯಾಕೆ ಆತಂಕ..?  ದುಡ್ಡಿನಲ್ಲಿ ಬೇಕಾದಂತಹ ಸಾಮಾಗ್ರಿಗಳನ್ನ ಖರೀದಿಸಬಹುದು ಅಕ್ಕಿ ಪೂರೈಕೆಯಲ್ಲಿ ಸ್ವಲ್ಪ ತೊಂದರೆಯಾಗಿದೆ ಹಣ ನೀಡುತ್ತೇವೆ. ಬಿಜೆಪಿಯವರು ಎಲ್ಲದರಲ್ಲೂ ಸುಳ್ಳು ಹೇಳುತ್ತಾರೆ ಎಂದು ಕಿಡಿಕಾರಿದರು.

ನಾವು ಕೊಟ್ಟ ಕಾರ್ಯಕ್ರಮ ನರೇಂದ್ರೆ ಮೋದಿಯದ್ದು ಅಕ್ಕಿ ಅಂದ್ರೆ ಹೇಗೆ..? ಸಿಎಂ ಮತ್ತು ಡಿಸಿಎಂ ಜನಪ್ರಿಯತೆಯನ್ನ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಹೇಗೆ ಜನರು ಹೊರಹಾಕಿದರೂ ಅದೇ ರೀತಿ ಲೋಕಸಭೆಯಲ್ಲೂ ಬಿಜೆಪಿ ಸೋಲಲಿದೆ ಎಂದು ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದರು.

Key words: center -7.5 lakh -tonnes – rice – not – given – Minister -Santosh Lad.