ಎರಡನೇ ಮದುವೆಯಾದ ೫ ತಿಂಗಳಲ್ಲೇ ಗೃಹಿಣಿ ನೇಣಿಗೆ ಶರಣು.

ಮೈಸೂರು, ಮೇ 06, 2020 : (www.justkannada.in news ) ಎರಡನೇ ಮದುವೆಯಾದ ೫ ತಿಂಗಳಲ್ಲೇ ಗೃಹಿಣಿ ನೇಣಿಗೆ ಶರಣು. ಮೊದಲ ಪತಿಯ ನೆನಪಿನಿಂದ ಹೊರಬರಲಾರದೆ ಆತ್ಮಹತ್ಯೆಗೆ ಶರಣಾದ ಮಹಿಳೆ.

ಹೀನಾ ಕೌಸರ್(೨೭)ಮೃತ ದುರ್ದೈವಿ. ಮೈಸೂರಿನ ಉದಯಗಿರಿಯ ಗೌಸಿಯಾನಗರದಲ್ಲಿ ಘಟನೆ. ಮೂರು ಮಕ್ಕಳ ತಾಯಿ ಹೀನಾ ಕೌಸರ್.

mysore-police-women-suicide-muslim-lady

ಕೆಲ ತಿಂಗಳುಗಳ ಹಿಂದೆ ಹೀನಾ ಕೌಸರ್ ಮತ್ತೊಂದು ಮದುವೆ ಆಗಿದ್ದರು. ಆದರೆ ಮೊದಲ ಗಂಡನ ನೆನಪಿನಿಂದ ಹೊರಬರಲಾರದೆ ಕೊರಗುತ್ತಿದ್ದರು ಎನ್ನಲಾಗಿದೆ. ಅದೇ ವೇದನೆಯಲ್ಲಿ ನೇಣಿಗೆ ಹೀನಾ ಕೌಸರ್ ಶರಣಾದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

key words : mysore-police-women-suicide-muslim-lady