ಲಾಕ್ ಡೌನ್ ಟೈಮಲ್ಲೊಂದು ಸ್ಪೆಷಲ್ ‘ಲಾಟರಿ’ ಹೊಡೆದಿದೆ ನೋಡಿ !

 ಬೆಂಗಳೂರು, ಮೇ 06, 2020 (www.justkannada.in): ಲಾಟರಿ ಹೊಡೆದಿದೆ !

ಲಾಕ್ ಡೌನ್ ಟೈಮಲ್ಲಿ ಇಂದೆಂತಾ ಲಾಟರಿ ಹೊಡೀತು !? ಅಂತ ಯೋಚನೆ ಮಾಡ್ತಾ ಇದ್ದೀರಾ! ಲಾಟರಿ ಹೊಡೆದಿರೋದು ಪ್ರಯೋಗ್ ಸ್ಟೂಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ !

ಹೌದು. ಹೊಸ ಪ್ರಯೋಗಗಳನ್ನು ಮಾಡಿಕೊಂಡು ಬಂದಿರುವ ಪ್ರಯೋಗ್ ಸ್ಟೂಡಿಯೋ ಮೂರು ವಸಂತಗಳನ್ನು ಪೂರೈಸಿದೆ. ಈ ಖುಷಿಗಾಗಿ ಹೊರ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಆ ಕಿರುಚಿತ್ರದ ಹೆಸರೇ ‘ಲಾಟರಿ’ ಪ್ರಯೋಗ್ ಸ್ಟೂಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಈ ಕಿರುಚಿತ್ರವನ್ನು ಬಿಡುಗಡೆ ಮಾಡಲಾಗಿದ್ದು, ಗಮನ ಸೆಳೆಯುತ್ತಿದೆ.

20 ನಿಮಿಷಗಳ ಅವಧಿಯ ‘ಲಾಟರಿ’ ಕಿರುಚಿತ್ರ ಬಡ ಕುಟುಂಬವೊಂದರ ಆರ್ಥಿಕ ಪರಿಸ್ಥಿತಿ… ಅದೃಷ್ಟದ ‘ಲಾಟರಿ’ ನಂಬಿರುವ ಕಥಾ ನಾಯಕನ ಬದುಕಿನ ಹೊಡೆಯುವ ‘ಲಾಟರಿ’ ಜಂಜಾಟವನ್ನು ಬಿಂಬಿಸಿದೆ. ಜಗದೀಶ್ ನಡನಳ್ಳಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಪ್ರಿಯಾ, ನಂದನ ಇತರರು ನಟಿಸಿದ್ದಾರೆ.

ಮೂರು ವಸಂತ ಪೂರೈಸಿದ ಪ್ರಯೋಗ್ ಸ್ಟೂಡಿಯೋ

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರದೀಪ್‌ ಮುಳ್ಳುರು, ಕನ್ನಡ ಸಿನಿಮಾಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ 3 ವರ್ಷಗಳ ಹಿಂದೆ ಅತ್ಯಾಧುನಿಕ ತಂತ್ರಜ್ಞಾನದ ಸುಸಜ್ಜಿತ ಸೌಲಭ್ಯಗಳುಳ್ಳ “ಪ್ರಯೋಗ್‌ ಸ್ಟುಡಿಯೋ’ ಎನ್ನುವ ಪೋಸ್ಟ್‌ ಪ್ರೊಡಕ್ಷನ್‌ ಸ್ಟುಡಿಯೋವನ್ನು ಪ್ರಾರಂಭಿಸಿದ್ದರು.

ಅದೀಗ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ ಮುನ್ನಡೆದಿದೆ. ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ, ನಾಟಕ ನಿರ್ಮಾಣ, ಕಿರುಚಿತ್ರಗಳಿಗೆ ಡಬ್ಬಿಂಗ್, ಕಿರುಚಿತ್ರಗಳಿಗೆ ಸಂಗೀತ ನಿರ್ದೇಶನ, ನಾಟಕಗಳಿಗೆ ಸಂಗೀತ ನಿರ್ದೇಶನದ ಪ್ರಯೋಗಗಳನ್ನು ಪ್ರಯೋಗ್ ಸ್ಟುಡಿಯೋ ಮಾಡುತ್ತಿದೆ.

ಇಲ್ಲಿದೆ ನೋಡಿ ಆ ಕಿರುಚಿತ್ರ…