Tuesday, September 22, 2026

BDA Apartments

ಕಿರಿಕ್ ಬೆಡಗಿ ರಶ್ಮಿಕಾ ಮಂದಣ‍್ಣ ಈಗ ನ್ಯಾಷನಲ್ ಕ್ರಷ್ ! BDA JK_Adv BDA Adv
Home Cinema ಮೈಸೂರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ…!

ಮೈಸೂರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ…!

ಮೈಸೂರು, ಸೆ.03, 2021 : (www.justkannada.in news ) ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಹಚ್ಚ ಹಸರಿರುವಾಗಲೇ ಮೈಸೂರಿನಲ್ಲಿ ಮತ್ತೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ.
ಇಲ್ಲಿನ ಆರ್.ಎಎಸ್. ನಾಯ್ಡು ನಗರದ ಪ್ರಮುಖ ರಸ್ತೆಯಲ್ಲಿರುವ ಸ್ಟಡಿ ಹೌಸ್ನಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ ಎನ್ನಲಾಗಿದೆ.
ವಿದ್ಯಾರ್ಥಿನಿ ಒಂಟಿಯಾಗಿದ್ದ ವೇಳೆ ಸ್ಟಡಿ ಹೌಸ್ ಒಳಪ್ರವೇಶಿಸಿರುವ ಕಿಡಿಗೇಡಿ. ಯುವತಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಕಿರಾತಕ. ಸಂತ್ರಸ್ತೆ ಆಸ್ಪತ್ರೆಗೆ ದಾಖಲು.
ಆಂಧ್ರ ಪ್ರದೇಶ ಮೂಲದ 7 ಮಂದಿ ಸ್ಟಡಿ ಹೌಸ್‌ನಲ್ಲಿದ್ರು. ಒಂಟಿಯಾಗಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಲೆತ್ನಿಸಿ, ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಕಾಮುಕ.
ಘಟನೆ ನಡೆದ ವೇಳೆ ಉಳಿದ ವಿದ್ಯಾರ್ಥಿಗಳು ತರಗತಿ, ಸೆಮಿನಾರ್ ಗೆ ತೆರಳಿದ್ರು. ಈ ವೇಳೆಯನ್ನೇ ಗಮನಿಸಿ ಸ್ಟಡಿ ಹೌಸ್ ಒಳ ನುಗ್ಗಿರುವ ಕಿರಾತಕ. ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿ.

key words : mysore-police-rape-attempt-complaint