ಮೈಸೂರು ಪೊಲೀಸರ ಭರ್ಜರಿ ಕಾರ್ಯಚರಣೆ: 15 ಮಂದಿ ಹೈಟೆಕ್ ಖದೀಮರು ಅಂದರ್.

ಮೈಸೂರು,ಜುಲೈ,3,2021(www.justkannada.in): ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆಯುತ್ತಿದ್ದ 15 ಮಂದಿ ಹೈಟೆಕ್ ಖದೀಮರನ್ನ ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ  ಬಂಧಿಸಿದ್ದಾರೆ.jk

ಚೋಳಮಂಡಲಂ ಫೈನಾನ್ಸ್‌ಗೆ ದೋಖಾ‌ ಮಾಡಿದ 15 ಮಂದಿಯನ್ನ ಮೈಸೂರು ಪೊಲೀಸರು ಬಂಧಿಸಿದ್ದು ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಬಂಧಿತರಿಂದ 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್‌ಟಾಪ್ ಅನೇಕ ದಾಖಲೆಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

10 ಲಾರಿಗಳಿಗೆ ಒಟ್ಟು 1,35,53,000 ರೂ ಸಾರಿಗೆ ವಾಹನ ಸಾಲ ಪಡೆದಿದ್ದ ಖದೀಮರು ಕೆಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು. ಬಳಿಕ ಸಾಲದ ಮಾಸಿಕ ಕಂತು ಕಟ್ಟುವುದನ್ನ ಆರೋಪಿಗಳು ನಿಲ್ಲಿಸಿದ್ದಾರೆ.  ಈ ವೇಳೆ ಲಾರಿ ವಶಕ್ಕೆ ಪಡೆಯಲು ಫೈನಾನ್ಸ್ ಕಂಪನಿ ಮುಂದಾಗಿದ್ದು, ಈ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ

ಈ ನಡುವೆ ಆರೋಪಿಗಳು ಲಾರಿಗಳನ್ನ ಇಂಜಿನ್ ಚಾರ್ಸಿ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಢಿದ್ದರು.  ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್‌ ವಿಜಯ್  ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ಠಾಣೆಗೆ ದೂರು ನೀಡಿದ್ದರು. 2019-20 ಸಾಲಿನ ಲಾರಿ ಸಾಲದ ಬಗ್ಗೆ ಉಲ್ಲೇಖಿಸಿ ದೂರು ನೀಡಿದ್ದರು.

ನಂತರ ದೇವರಾಜ ಠಾಣೆ ಪೊಲೀಸರು  ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ‌ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.  ಆರೋಪಿಗಳು ಲಾರಿ ಇಲ್ಲದೆಯೇ ಆಂಧ್ರಪ್ರದೇಶದ ವಿವಿಧ RTO ಕಚೇರಿಯಲ್ಲಿ ಆರ್ಸಿ, ವರ್ಗಾವಣೆ ದಾಖಲಾತಿ ಸೃಷ್ಟಿಸಿ ಮರು ನೊಂದಣಿಗೆ ಸಲ್ಲಿಕೆ ಮಾಡಿದ್ದರು. ಇದಕ್ಕೆ ಸ್ಥಳೀಯ ನಕಲಿ ವಿಳಾಸದ ದಾಖಲೆ ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ.

ಲಾರಿ ಪರಿಶೀಲನೆಗೆ ಹಾಜರುಪಡಿಸದೆ ಖದೀಮರು ಆರ್ಸಿ ಕಾರ್ಡ್ ಪಡೆಯುತ್ತಿದ್ದರು. ಬರೋಬ್ಬರಿ 200 ಆರ್ಸಿ ಕಾರ್ಡ್ ಮಾಡಿಸಿರುವ ಬಗ್ಗೆ ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ಧಾರೆ.

ಹೀಗೆ ಹಲವು ಫೈನಾನ್ಸ್ ಕಂಪನಿಗಳಿಗೆ ನಕಲಿ ದಾಖಲೆ ನೀಡಿ ಆರೋಪಿಗಳು ಮೋಸ ಮಾಡಿದ್ದು ಈ ಬಗ್ಗೆಯು ತನಿಖೆ ನಡೆಯುತ್ತಿದ್ದು, RTO ಅಧಿಕಾರಿಗಳು ಶಾಮೀಲಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನು ತನಿಖೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಪೊಲೀಸ್ ತಂಡ ತೆರಳಿದೆ.

ENGLISH SUMMARY…

15 hi-tech fraudsters held in Mysuru police
Mysuru, July 3, 2021 (www.justkannada.in): The Mysuru city police have arrested 15 hi-tech fraudsters who were availing vehicle loans by creating duplicate documents.
All these 15 fraudsters had cheated Cholamandalam Finance, whom the police have held. The police have recovered 7 lorries, 2 cars, 1 bike, 2 laptops, and several documents from them and are on the lookout for the remaining fraudsters.
The fraudsters had availed a sum of Rs. 1,35,53,000 loan to purchase 10 lorries and had stopped paying the installment amount after a few months. When the finance company went to seize the vehicles they allegedly abused the staff and threatened to kill them.
In the meanwhile, the fraudsters had also changed the Chasis number of a few lorries and had sold it to others. Manager of Cholamandalam Finance, Mysuru Branch registered a complaint regarding this at the Devaraja Police Station, in Mysuru, regarding the lorry loan given during the year 2019-2020.
During interrogation by the Devaraja police, the fraudsters agreed to their crime. They had created duplicate RC, transfer documents, and had submitted them to the RTO office in Andhra Pradesh, without lorries! They had used duplicate local address documents for this, according to the police.
The fraudsters used to get RC cards without presenting the lorries for inspection. During interrogation, the fraudsters have agreed to have made about 200 RC cards like this! The police are digging to know more about the case.
Keywords: Huge haul by Mysuru police/ 15 fraudsters/ arrested/ Cholamandalam Finance/ lorries/ vehicle loan/ cheating

Key words: Mysore- Police-Arrest – 15 accused- Vehicle Loans- Cheating