ಮೈಸೂರು,ಫೆಬ್ರವರಿ,8,2021(www.justkannada.in): ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಇಬ್ಬರನ್ನ ಕೊಲೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನಲ್ಲಿ ಎಲೆ ತೋಟದ ಬಳಿ ಈ ಜೋಡಿ ಕೊಲೆಯಾಗಿದೆ. ಕಿರಣ್( 29) ಮತ್ತು ಕಿಶನ್ (29) ಕೊಲೆಯಾದವರು. ಇಬ್ಬರು ಮೈಸೂರಿನ ಗೌರಿ ಶಂಕರನಗರ ನಿವಾಸಿಗಳು ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ತಡರಾತ್ರಿ ಇಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಮಧು ಗಂಭೀರ ಗಾಯಗೊಂಡಿದ್ದು ಗಾಯಾಳುವನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಡಿಸಿಪಿ ಡಾ ಎ ಎನ್ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೆ ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ENGLISH SUMMARY….
Twin murder in Mysuru: One grievously injured
Mysuru, Feb. 08, 2021 (www.justkannada.in): In a gruesome incident, culprits have killed two persons in Mysuru.
The incident has taken place near the ‘Yele Thota’ in the city and the two persons who were killed in the incident are identified as Kiran (29), and Kishan (29), residents of Gowrishankarnagara in Mysuru. Both of them were murdered using deadly weapons. Another person named Madhu is grievously injured and has been admitted to the hospital, according to the police.
DCP Dr. A.N. Prakash Gowda visited the spot and inspected it. A case has been registered at the K.R. Police Station.
Keywords: Twin murder in Mysuru city/ Yele Thota/ gruesome incident/ one injured
Key words: Mysore –murdered-two- serious injury