Wednesday, October 7, 2026

BDA Apartments

immense respect BDA JK_Adv BDA Adv
Home Front Page ಬಿಎಸ್ ವೈ ತಂಗಿ ಮಗನ ಫಾರಂ ರಸ್ತೆಗೆ ಕೋಟ್ಯಾಂತರ ಹಣ :ಮೊದಲು ನಿಮ್ಮ ಕುಟುಂಬ ರಾಜಕಾರಣ...

ಬಿಎಸ್ ವೈ ತಂಗಿ ಮಗನ ಫಾರಂ ರಸ್ತೆಗೆ ಕೋಟ್ಯಾಂತರ ಹಣ :ಮೊದಲು ನಿಮ್ಮ ಕುಟುಂಬ ರಾಜಕಾರಣ ಬಿಡಿ -ಶಾಸಕ ಹೆಚ್.ಪಿ  ಮಂಜುನಾಥ್ ವಾಗ್ದಾಳಿ …

ಮೈಸೂರು,ಏಪ್ರಿಲ್,4,2021(www.justkannada.in): ಹುಣಸೂರಿನ ತಾಲೂಕಿಗೆ ಯಡಿಯೂರಪ್ಪ ನವರ ಕೊಡುಗೆ ಇಲ್ಲ. ಸಿಎಂ ರಾಜ್ಯ ಸರ್ಕಾರದ ದುಡ್ಡನ್ನು ಸ್ವಕುಟುಂಬಕ್ಕೆ ಬಳಸುತ್ತಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ನವರದ್ದು ಧೃತರಾಷ್ಟ್ರನ ಪ್ರೇಮ.  ಮೊದಲು ನಿಮ್ಮ ಪುತ್ರ ವ್ಯಾಮೋಹ ಬಿಡಿ ಎಂದು ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್  ವಾಗ್ದಾಳಿ ನಡೆಸಿದರು.Illegally,Sand,carrying,Truck,Seized,arrest,driver

ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಹೆಚ್.ಪಿ ಮಂಜುನಾಥ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಬಿ.ಎಸ್ ಯಡಿಯೂರಪ್ಪ ನವರ ಕುಟುಂಬದ ಸರ್ಕಾರ ಇದೆ. ಹುಣಸೂರಿನ ತಾಲ್ಲೂಕಿಗೆ ಯಡಿಯೂರಪ್ಪ ನವರ ಕೊಡುಗೆ ಇಲ್ಲ. ನನ್ನ ವಿರುದ್ದ ಸೋತವರಿಗೆ  ಯಡಿಯೂರಪ್ಪನವರು ಅಧಿಕಾರ ಕೊಟ್ಟಿದ್ದಾರೆ. ಯಡಿಯೂರಪ್ಪ ನವರದ್ದು ಧೃತರಾಷ್ಟ್ರನ ಪ್ರೇಮ. ಕಳೆದ ಸರ್ಕಾರದಿಂದ ಬಂದ ಕೋಟ್ಯಾಂತರ ಹಣವನ್ನು ತಡೆ ಹಿಡಿದಿದ್ದಾರೆ ಎಂದು ಕಿಡಿಕಾರಿದರು.

 ಬಿಎಸ್ ವೈ ತಂಗಿ ಮಗನ ಫಾರಂ ರಸ್ತೆಗೆ ಕೋಟ್ಯಾಂತರ ಹಣ…

ಬೀದರ್ ನಿಂದ ಮಂಗಳೂರಿನವರಗೆ ಕುಟುಂಬ ರಾಜಕೀಯ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರಕ್ಕೆ ಅನುದಾನ ನೀಡಿರುವುದು ವಿಜಯೇಂದ್ರಗೋಸ್ಕರ. ನನ್ನ ಕ್ಷೇತ್ರದ ಕಟ್ಟೆಮಳವಾಡಿ ಕಟ್ಟೆ ಅಭಿವೃದ್ಧಿ ಆಗಿಲ್ಲ. ಇದರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಅಲ್ಲೇ ಪಕ್ಕದಲ್ಲಿರುವ ಯಡಿಯೂರಪ್ಪ ನವರ ತಂಗಿ ಮಗನ ಫಾರಂ ರಸ್ತೆಗೆ ಕೋಟ್ಯಾಂತರ ಹಣ ನೀಡಿದ್ದಾರೆ. ಮೂರು ಕೋಟಿ ವೆಚ್ಚದಲ್ಲಿ ಧರ್ಮಾಪುರ ಬಳಿಯ ದೈತನಕೆರೆ ಅಭಿವೃದ್ಧಿಗೆ ಟೆಂಡರ್ ನೀಡಿದ್ದಾರೆ. ಸಿಎಂ ತಂಗಿ ಮಗ ಎಸ್.ಸಿ.ಅಶೋಕ್ ನ ತೋಟಕ್ಕೆ ನೀರು ಹರಿಸಲು ದೈತ್ಯನ ಕರೆ ಅಭಿವೃದ್ಧಿ ಮಾಡ್ತಿದ್ದಾರೆ. ಒಬ್ಬ ಜನ ಪ್ರತಿನಿಧಿ ಕೇಳಿದ್ರೆ ಅನುದಾನ ಕೊಡಲ್ಲ. ಕುಟುಂಬಸ್ಥರಿಗೆ ಮಾತ್ರ ಕೋಟಿ, ಕೋಟಿ ಹಣ ನೀಡ್ತಿದ್ದಾರೆ. ಸಿಎಂ ರಾಜ್ಯ ಸರ್ಕಾರದ ದುಡ್ಡನ್ನು ಸ್ವಕುಟುಂಬಕ್ಕೆ ಬಳಸುತ್ತಿದ್ದಾರೆ. ಇಂದು 100% ಲೂಟಿ ಸರ್ಕಾರ ಕುಟುಂಬ ರಾಜಕಾರಣದಿಂದ ಎಲ್ಲ ಮಂತ್ರಿಗಳಿಗೆ ಮಾರ್ಮಘಾತ ಆಗಿದೆ. ನನ್ನ ಲೆಕ್ಕದಲ್ಲಿ ಯಡಿಯೂರಪ್ಪನವರು ಡಮ್ಮಿ ಎಂದು ಹೆಚ್.ಪಿ ಮಂಜುನಾಥ್ ಟೀಕಿಸಿದರು.

ಹುಣಸೂರಿನ ಬಗ್ಗೆ ಯಾಕೆ ನಿಮಗೆ ಈ ತಾರತಮ್ಯ.

ಹುಣಸೂರಿನ ಬಗ್ಗೆ ಯಾಕೆ ನಿಮಗೆ ಈ ತಾರತಮ್ಯ. ಹುಣಸೂರಿನಲ್ಲಿ ನಿಮ್ಮವರು ಯಾರು ಇಲ್ಲ ಅಂತನಾ.? ನಿಮ್ಮ ಕುಟುಂಬವನ್ನಾದರೂ ಹುಣಸೂರಿಗೆ ತಂದು ಬಿಡಿ. ನಿಮ್ಮ ಕುಟುಂಬಕ್ಕಾಗಿ ಈ ಸರ್ಕಾರ ನಡೆಸುತ್ತಿದ್ದೀರಾ.? ಪಿಪಿಇ ಕಿಟ್, ಕರೋನಾ ವಾಕ್ಸಿನ್ ಇದೆಲ್ಲ ತರುವುದರಲ್ಲಿ ನಿಮ್ಮ‌ ಕುಟುಂಬದವರೇ ಇದ್ದಾರೆ. ಅದರ ದಾಖಲೆಯು‌ ನನ್ನ ಬಳಿ ಇದೆ. ಹೈದ್ರಾಬಾದ್ ದೆಹಲಿಯಿಂದ ಎಲ್ಲ ಬಂದಿರಬಹುದು. ಆದ್ರೆ ಅದು ಬರುವುದಕ್ಕೆ ಒಂದು ಸಂಸ್ಥೆ ಬೇಕಲ್ಲವೇ.? ಅದು ನಿಮ್ಮ ಕುಟುಂಬದವರೇ ವಹಿಸಿಕೊಂಡಿದ್ದಾರೆ. ನಿಮ್ಮವರನ್ನೇ ಯಾರದರು ಹುಣಸೂರಿಗೆ ನೇಮಕ‌ ಮಾಡಿ. ಅವರ ಮುಖಾಂತರವೇ ನಾವು ಕೆಲಸ ಮಾಡಿಸಿಕೊಳ್ಳುತ್ತೀವಿ ಎಂದು ಶಾಸಕ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.mysore-mla-hp-manjunath-outrage-cm-bs-yeddyurappa-family-politics

ನನ್ನ ಪ್ರಕಾರ ಮೋದಿ ಅಮಿತ್ ಶಾ ಕಣ್ತಪ್ಪಿಸಿ ಸಿಎಂ ಹಣ ಮಾಡುತ್ತಿದ್ದಾರೆ…

ಸ್ವಪಕ್ಷದವರೇ ಸಿಎಂ ವಿರುದ್ಧ ಗಂಭೀರ ಆರೋಪ ಮಾಡ್ತಿದ್ದಾರೆ. ಆದರೂ ಏನು ಗೊತ್ತಿಲ್ಲದಂತೆ ಸಿಎಂ ಹಾಗೂ ಬಿಜೆಪಿ ವರ್ತಿಸುತ್ತಿದೆ. ನನ್ನ ಪ್ರಕಾರ ಮೋದಿ ಅಮಿತ್ ಶಾ ಕಣ್ತಪ್ಪಿಸಿ ಸಿಎಂ ಹಣ ಮಾಡುತ್ತಿದ್ದಾರೆ. ಎಲ್ಲ ವಿಚಾರದಲ್ಲೂ ಹಣ ಹೊಡೆಯುತ್ತಿದ್ದಾರೆ. ಈ‌ ಬಗ್ಗೆ ಕೇಂದ್ರದ ನಾಯಕರಿಗೆ ಗೊತ್ತಾಗದಂತೆ ಇಡೀ ಸಿಎಂ ಕುಟುಂಬ ಸೇರಿಕೊಂಡಿದೆ. ದೃತರಾಷ್ಟ್ರನ ಪ್ರೀತಿ ಅವರ ಕುಟುಂಬವನ್ನೇ ನಾಶ ಮಾಡುತ್ತೇ. ಮೊದಲು ನಿಮ್ಮ ಪುತ್ರ ವ್ಯಾಮೋಹ ಬಿಡಿ. ಯಾವ ಕುಟುಂಬದಲ್ಲೂ ನಿಮ್ಮ ರೀತಿ ರಾಜಕಾರಣ ಮಾಡಿಲ್ಲ. ಮೊದಲು ನಿಮ್ಮ ಕುಟುಂಬ ರಾಜಕಾರಣ ಬಿಡಿ ಎಂದು ಶಾಸಕ ಹೆಚ್.ಪಿ ಮಂಜುನಾಥ್ ಕಿಡಿಕಾರಿದರು.

Key words: mysore-MLA-HP Manjunath-outrage-CM BS Yeddyurappa-family politics