ಯಾರನ್ನೋ ಮೆಚ್ಚಿಸಲು ತೀರ್ಮಾನ ಬದಲಿಸಲು ಸಾಧ್ಯವಿಲ್ಲ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

ಬೆಂಗಳೂರು,ಏಪ್ರಿಲ್,4,2021(www.justkannada.in):  ಚಿತ್ರರಂಗಕ್ಕೆ ಮೂರು ದಿನಗಳ ಕಾಲ ಪೂರ್ಣ ವಿನಾಯಿತಿ ನೀಡಿರುವ ಹಿನ್ನೆಲೆ, ಯಾರನ್ನೋ ಮೆಚ್ಚಿಸಲು ತೀರ್ಮಾನ ಬದಲಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.Illegally,Sand,carrying,Truck,Seized,arrest,driver

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ನಮಗೆ ಜನರ ಆರೋಗ್ಯ ಮುಖ್ಯ. ಕೆಲವರು ನನ್ನನ್ನ ಟೀಕೆ ಮಾಡುತ್ತಿದ್ದಾರೆ. ನನಗೆ ಬೇಜಾರಿಲ್ಲ. ರಾಜ್ಯದ ಜನರ ಆರೋಗ್ಯ ಕಾಪಾಡೋದು ಮೊದಲ ಆದ್ಯತೆ. ಜನರ ಜೀವನ, ಜೀವನೋಪಾಯ ಮುಖ್ಯ ಎಂದರು.no change -decision – impress- someone-Health Minister- Dr K Sudhakar

ಸಿಎಂ ಬಿಎಸ್ ವೈಗೆ ಒತ್ತಡ ಬಂದಿದೆ. ಸಿನಿಮಾ ರಂಗ, ಶೈಕ್ಷಣಿಕ ಕ್ಷೇತ್ರ, ಜಿಮ್ ಮಾಲೀಕರ ಸಂಘ ಸೇರಿ ಹಲವರಿಂದ ಒತ್ತಡ ಬಂದಿದೆ. ಎಲ್ಲರ ಜತೆ ಸಮಾಲೋಚನೆ ಮಾಡಿ ಸಿಎಂ ನಿರ್ಧಾರ ಮಾಡುತ್ತಾರೆ. ಹಾಗಂತ ಎಲ್ಲರಿಗೂ  ವಿನಾಯಿತಿ ಕೊಡಲು ಸಾಧ್ಯವಿಲ್ಲ ಎಂದು ಡಾ.ಕೆ ಸುಧಾಕರ್ ತಿಳಿಸಿದರು.

Key words: no change -decision – impress- someone-Health Minister- Dr K Sudhakar