ಆನ್ ಲೈನ್ ಕಂದಾಯ ಪಾವತಿಸುವ ತಂತ್ರಾಂಶಕ್ಕೆ ಸಚಿವರಿಂದ ಚಾಲನೆ.

ಮೈಸೂರು. ಜುಲೈ. 17,2021(www.justkannada.in):  ಮೈಸೂರಿನ ಜನತೆಗೆ ಕಂದಾಯ ಪಾವತಿಸಲು ಸುಲಭವಾಗುವ ನಿಟ್ಟಿನಲ್ಲಿ ಆನ್ ಲೈನ್ ಕಂದಾಯ ಪಾವತಿಸುವ ತಂತ್ರಾಂಶಕ್ಕೆ ನಗರಾಭಿವೃದ್ಧಿ ಸಚಿವ ಬೈರತಿಬಸವರಾಜ್ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಚಾಲನೆ ನೀಡಿದರು.jk
ಮೂಡಾ ವತಿಯಿಂದ ಮೂಡಾ ಆವರಣದಲ್ಲಿ  ಶನಿವಾರ ಬೆಳಿಗ್ಗೆ ಆಯೋಜಿಸಿದ್ಧ ಇ- ಆಸ್ತಿ ತೆರಿಗೆ ವೆಬ್ ಸೈಟ್ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಅವರು ಮೈಸೂರು ಅಭಿವೃದ್ಧಿಯ ದೃಷ್ಠಿಯಿಂದ ಮೂಡ ಒಂದು ಹೊಸ ಹೆಜ್ಜೆ ಇಡುತ್ತಿರುವುದು ಬಹಳ ಸಂತೋಷದ ವಿಷಯ ಹಾಗೂ ಈ ಆನ್ ಲೈನ್ ವ್ಯವಸ್ಥೆಯನ್ನ ಮೈಸೂರಿನ ನಾಗರೀಕರು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ ಎಂದು ಆಶಿಸಿದ್ದರು.
ನಾನು ಎರಡು ಮೂರು ದಿನಗಳಿಂದ ಮೈಸೂರಿನಲ್ಲಿಯೇ ಅನೇಕ ಕಾರ್ಯರಕ್ರಮಗಳನ್ನು ಕೈಗೊಂಡಿದ್ದೇವೆ ಹಾಗೂ ಪಕ್ಷ ಭೇದ ಮರೆತು ಮೈಸೂರು ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ತಿಳಿಸಿದರು.

ಇದೇ ವೇಳೆ ಮೂಡಾ ಅಧ್ಯಕ್ಷ ರಾಜೀವ್. ಶಾಸಕರಾದ ಎಲ್ ನಾಗೇಂದ್ರ ,ಜಿ ಟಿ ದೇವೇಗೌಡ, ತನ್ವಿರ್ ಸೇಠ್, ಯತೀಂದ್ರ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಗೌತಮ್ ಬಗಾದಿ , ಮೂಡಾ ಆಯುಕ್ತ ನಟೇಶ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

key words: mysore- Ministers -Online -Revenue Payment- Software-muda