ಸಿಎಂ ಬಿಎಸ್ ವೈ ದೆಹಲಿ ಭೇಟಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು. ಜುಲೈ. 17.2021( www.justkannada.in) : ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಒಂಟಿಯಾಗಿ ಹೋಗದೆ ಆರು ಬ್ಯಾಗ್ ಗಳ ಸಮೇತ ಹೋಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. jk

ಸಿಎಂ ಬಿಎಸ್ ವೈ ದೆಹಲಿ ಭೇಟಿ ಕುರಿತು  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆನ್ನೆ ವಿಮಾನದಲ್ಲಿ ದೆಹಲಿಗೆ ತೆರಳುವ ವೇಳೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹತ್ತಿರ ಆರು ಬ್ಯಾಗ್ ಗಳು ಇರುವ ಮಾಹಿತಿಯೂ ಸಹ ಗೊತ್ತಿದೆ. ಆ ಆರು ಬ್ಯಾಗ್ ಗಳನ್ನು ಹೈಕಮಾಂಡ್ ಗೆ ಉಡುಗೊರೆ ನೀಡಲು ಹೋಗಿದ್ದರು ಅನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

key words:CM BS Yeddyurappa- Visits- Delhi-former CM-HD Kumaraswamy- new bomb