ನಟ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿ ಮುಂದುವರೆಯುವುದು ಬೇಡ- ಬಡಗಲಪುರ ನಾಗೇಂದ್ರ

ಮೈಸೂರು. ಜುಲೈ. 17,2021(www.justkannada.in):  ನಟ ‍ದರ್ಶನ್  ಕೃಷಿ ಇಲಾಖೆಯ ರಾಯಭಾರಿಯಾಗಿ ಮುಂದುವರೆಯುವುದು ಬೇಡ ಎಂದು  ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. jk

ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ರೈತಮುಖಂಡ ಬಡಗಲಪುರ ನಾಗೇಂದ್ರ, ಕೃಷಿ ಇಲಾಖೆಯ ರಾಯಭಾರಿಯಾಗಿ ಮುಂದುವರೆಯುವುದು ಬೇಡ.  ತಲೆ ಕಟ್ ಮಾಡ್ತಿನಿ ಅನ್ನೊದು, ಹಲ್ಲೆ ಮಾಡುವಂತಹದ್ದು ಸರಿಯಲ್ಲ,  ಈ ರೀತಿಯ ಭಾಷೆಗಳನ್ನು ಸಹ ಬಳಸುವುದು ತಪ್ಪು ಹಾಗೂ ಹೀಗೆ ಮಾತನಾಡುವುದು ರೈತ ಸಂಸ್ಕೃತಿ ಕೂಡ ಅಲ್ಲ ಎಂದರು.

ನಟರು ಇತರರರಿಗೆ ಮಾದರಿಯಾಗಬೇಕು ಕೃಷಿ ಸಚಿವರೂ ಕೂಡಾ ನಟರಾಗಿದ್ದವರು ಹಾಗಾಗಿ  ನಟ ದರ್ಶನ್ ನಡವಳಿಕೆಯ ಬಗ್ಗೆ ತಿದ್ದುಕೊಳ್ಳುವಂತೆ ತಿಳಿಹೇಳಿ ಎಂದು ಕೃಷಿ ಸಚಿವರಿಗೆ ರೈತ ಮುಖಂಡ ಬಡಗಲಪುರ ನಾಗೇಂದ್ರ ಸಲಹೆ ನೀಡಿದರು.

Key words: Actor- Darshan – not continue -Ambassador – Department – Agriculture-Badagalpura Nagendra