ಕೆಆರ್‌ಎಸ್ ಅಣೆಕಟ್ಟು ಬಿರುಕು ಬಿಟ್ಟಿಲ್ಲ, ಆದರೆ ನೀರು ಸೋರಿಕೆಯಾಗುತ್ತಿದೆ- ನಿವೃತ್ತ ತಹಸಿಲ್ದಾರ್

ಮೈಸೂರು, ಜುಲೈ 17, 2021(www.justkannada.in): ನಿವೃತ್ತ ತಹಸಿಲ್ದಾರ್ ಬದ್ರಿನಾಥ್ ಅವರ ಪ್ರಕಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರವ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟು ಬಿರುಕು ಬಿಟ್ಟಿಕೊಂಡಿಲ್ಲವಾದರೂ ಸಹ, ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳಿಂದಾಗಿ ನೀರು ಸೋರಿಕೆಯಾಗುತ್ತಿದೆ.jk

ಕೆಆರ್‌ಎಸ್ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಮಂಡ್ಯ ಎಂಪಿ ಸುಮಲತಾ ಅಂಬರೀಷ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬದ್ರಿನಾಥ್ ಅವರು, “ಅಣೆಕಟ್ಟು ರಚನೆ ಬಿರುಕು ಬಿಟ್ಟಿಲ್ಲವಾದರೂ ಅಣೆಕಟ್ಟೆಯಿಂದ ನೀರು ಸೋರಿಕೆಯಾಗುತ್ತಿದ್ದು, ಆ ನೀರು ತಮಿಳುನಾಡಿನ ಕಡೆಗೆ ಹರಿಯುತ್ತಿದೆ ಎಂದಿದ್ದಾರೆ.

ಸರ್ಕಾರಕ್ಕೆ ಈ ಕುರಿತಂತೆ ಹಲವು ಬಾರಿ ಪತ್ರಗಳನ್ನು ಬರೆದಿದ್ದರೂ ಸಹ ನೀರಿನ ಸೋರಿಕೆಯನ್ನು ತಡೆಗಟ್ಟಲು ಯಾವುದೇ ನಿಯಂತ್ರಣ ಕ್ರಮಗಳನ್ನು ಕೈಗೊಂಡಿಲ್ಲ. ಬದ್ರಿನಾಥ್ ಅವರ ಪ್ರಕಾರ ಕೆಆರ್‌ಎಸ್ ಅಣೆಕಟ್ಟಿಗೆ 95 ವರ್ಷಗಳಾಗಿದ್ದು, ಇನ್ನೂ ಸಹ ಅದರ ನಿಜವಾದ ಉದ್ದೇಶ ಈಡೇರಿಕೆಯಾಗದೆ ಉಳಿದುಕೊಂಡಿದೆ.

ಆಗಿನ ಮೈಸೂರು ಹಾಗೂ ಮದ್ರಾಸ್ ರಾಜ್ಯ ಸರ್ಕಾರಗಳ ಒಪ್ಪಂದದಂತೆ 1.25ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿತ್ತು. ಆದರೆ ಪ್ರಸ್ತುತ ಕೇವಲ ೯೬,೪೧೯ ಎಕರೆ ಕೃಷಿ ಭೂಮಿಗೆ ಮಾತ್ರ ನೀರಾವರಿ ಲಭಿಸುತ್ತಿದೆ, ಎನ್ನುತ್ತಾರೆ ಬದ್ರಿನಾಥ್

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  KRS Dam -not cracked- water – leaking-retired- tahsildar