Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ನಾವೆಲ್ಲರೂ ಒಮ್ಮತ ಪ್ರದರ್ಶಿಸಿದರೆ ಕೊರೋನಾ ಮುಕ್ತ –ಮೈಸೂರು ಜನತೆಗೆ ಸಲಹೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್

ನಾವೆಲ್ಲರೂ ಒಮ್ಮತ ಪ್ರದರ್ಶಿಸಿದರೆ ಕೊರೋನಾ ಮುಕ್ತ –ಮೈಸೂರು ಜನತೆಗೆ ಸಲಹೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್

ಮೈಸೂರು,ಜೂ,29,2020(www.justkannada.in): ನಾವೆಲ್ಲರೂ ಒಮ್ಮತ ಪ್ರದರ್ಶಿಸಿದರೆ ಕೊರೋನಾ ಮುಕ್ತವಾಗಲಿದೆ. ನಮ್ಮ ಜೀವ ನಮ್ಮ ಹಕ್ಕು,ಇದೇ ನಮ್ಮ-ನಿಮ್ಮೆಲ್ಲರ ಮಂತ್ರವಾಗಲಿ ಎಂದು ಮೈಸೂರು ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮನವಿ ಮಾಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ದಿನೇ ದಿನೆ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ  ಹಾಗೂ ಜಿಲ್ಲಾಡಳಿತದ  ಪಾತ್ರ ಮುಖ್ಯ. ಸಾರ್ವಜನಿಕರ ಸಹಭಾಗಿತ್ವ ಕೂಡ ಪ್ರಮುಖವಾದದ್ದು. ನಾವೆಲ್ಲರೂ ಒಮ್ಮತ ಪ್ರದರ್ಶಿಸಿದರೆ ಕೊರೋನಾ ಮುಕ್ತವಾಗುತ್ತದೆ. ಸರ್ಕಾರದ ಸೂಚನೆ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.mysore-minister- st somashekar-corona

ಇನ್ನು ರಾಜ್ಯದಲ್ಲಿ ಪ್ರತಿದಿನ ರಾತ್ರಿ 8 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಪ್ರತಿ ಶನಿವಾರ ಹಾಗೂ ಭಾನುವಾರ ಸರ್ಕಾರಿ ಕಚೇರಿಗಳಿಗೂ ರಜೆ ಇರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಬದ್ಧತೆಯನ್ನು ಪ್ರದರ್ಶಿಸಬೇಕು. ನನ್ನನ್ನು ಸೇರಿ ಜನಪ್ರತಿನಿಧಿಗಳನ್ನು ಭೇಟಿ ಮಾಡಲು ಗುಂಪು ಕಟ್ಟಿಕೊಂಡು ಬರುವುದು ಬೇಡ. ತೀರಾ ಅನಿವಾರ್ಯತೆ ಇದ್ದರೆ ಮಾತ್ರ ಕಚೇರಿಗಳಿಗೆ ಬರುವುದು. ಮನೆ ಬಾಗಿಲಿನಿಂದ ಹೊರಗೆ ಕಾಲಿಡಬೇಕೆಂದಿದ್ದಲ್ಲಿ ಮಾಸ್ಕ್  ಕಡ್ಡಾಯ ಮಾಡಿಕೊಳ್ಳಿ, ಜೊತೆಗೆ ಯಾವಾಗಲೂ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಜೇಬಿನಲ್ಲಿಟ್ಟುಕೊಳ್ಳಿ. ಬಹುಮುಖ್ಯವಾಗಿ ಎಲ್ಲೇ ಹೋಗುವ ಸಂದರ್ಭ ಎದುರಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು  ಸಾರ್ವಜನಿಕರಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿಕೊಂಡರು.

Key words:  mysore-minister- st somashekar-corona