ಸಾರಿಗೆ ವ್ಯವಸ್ಥೆ ನಂಬಿದವರ ರಕ್ತ ಹೀರಿ ಸರ್ಕಾರ ನಡೆಸುತ್ತಿದ್ದಾರೆ- ಪ್ರಧಾನಿ ಮೋದಿ ವಿರುದ್ದ ಡಿ.ಕೆ ಶಿವಕುಮಾರ್ ಗುಡುಗು…

ಬೆಂಗಳೂರು,ಜೂ,29,2020(www.justkannada.in):  ಪೆಟ್ರೋಲ್ ಡಿಸೇಲ್ ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ. ಸಾರಿಗೆ ವ್ಯವಸ್ಥೆ ನಂಬಿದವರ ರಕ್ತ ಹೀರಿ ಸರ್ಕಾರ ನಡೆಸುತ್ತಿದ್ದಾರೆ. ಮೋದಿ ಅವರಿಗೆ ಕಣ್ಣು, ಕಿವಿ ಜತೆ ಹೃದಯವೂ ಇಲ್ಲ ಎಂದು  ಡಿ.ಕೆ ಶಿವಕುಮಾರ್  ವಾಗ್ದಾಳಿ ನಡೆಸಿದರು.

ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಇಂದು ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ಚಳುವಳಿ ನಡೆಸಿದರು. ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರನ್ನು ಜೀವಂತ ಸುಡುತ್ತಿದೆ. ಇದು ನಮ್ಮ ಹೋರಾಟವಲ್ಲ.  ಜನರನ್ನ ಉಳಿಸುವ ಹೋರಾಟ. ದೇಶದ ಎಲ್ಲಾ ವರ್ಗದ ಜನರನ್ನ ಬದುಕಿಸಲು ನಡೆಸುತ್ತಿರುವ ಹೋರಾಟ ಎಂದರು.petrol-diesel-KPCC president- DK Shivakumar-agianst- pm modi

ಜನರ ಧ್ವನಿಯಾಗುವುದು ನಮ್ಮ ಕರ್ತವ್ಯ. ಹೀಗಾಗಿ ಪೊಲೀಸ್ ಅಧಿಕಾರಿಗಳು ನಮ್ಮ ವಿರುದ್ಧ ಯಾವ ಕೇಸ್ ಬೇಕಾದರೂ ಹಾಕಿಕೊಳ್ಳಲಿ. ನಾನು ಇವರ ಯಾವ ಕೇಸ್ ಗೂ ಹೆದರುವವನಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: petrol-diesel-KPCC president- DK Shivakumar-agianst- pm modi