ಸಂಸದ ಪ್ರತಾಪ್ ಸಿಂಹ ಕುರಿತು ಮೇಯರ್ ತಸ್ನೀಂ ಹೇಳಿಕೆಗೆ ಮೈಸೂರು ನಗರ ಬಿಜೆಪಿ ಖಂಡನೆ…

ಮೈಸೂರು,ಅಕ್ಟೋಬರ್,23,2020(www.justkannada.in): ಮೈಸೂರು ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸಂಸದರಿಗೆ ನೀವು ಪಾಠ ಮಾಡುವ ಅವಶ್ಯಕತೆ ಇಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ವಿರುದ್ಧ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿಕಾರಿದರು. jk-logo-justkannada-logo

ಪ್ರತಾಪ್ ಸಿಂಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂಬ ಮೇಯರ್ ತಸ್ನೀಂ ಹೇಳಿಕೆಗೆ ಖಂಡಿಸಿ ಮೈಸೂರು ನಗರ ಬಿಜೆಪಿ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಮಾತನಾಡಿದ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಮೇಯರ್ ಕೊಡುಗೆ ಏನು..? ಅನುದಾನದಲ್ಲಿ ತಾರತಮ್ಯ ಮಾಡ್ತಿದ್ದಾರೆ ಅನ್ನೊ ಆರೋಪ ಮೇಯರ್ ಮೇಲಿದೆ. ಒಬ್ಬ ಲೋಕಸಭಾ ಸದಸ್ಯರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು ಎಂದು ಹರಿಹಾಯ್ದರು.

ಕೋವಿಡ್ ಸಂದರ್ಭದಲ್ಲಿ ಮೇಯರ್ ಎಲ್ಲಿ ಹೋಗಿದ್ದರು. ಎನ್.ಆರ್. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಆಹಾರ ಪಟ್ಟಣ ಹಂಚಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸಂಸದರು, ಶಾಸಕರು ಜನರಿಗೆ ಸಹಾಯ ಮಾಡಿದ್ದಾರೆ. ಆವಾಗ ಮೇಯರ್ ಏನು ಮಾಡ್ತಿದ್ರು.? ಎಂದು ಶ್ರಿವತ್ಸ ಪ್ರಶ್ನಿಸಿದರು.

ಮೈಸೂರಿಗೆ ಸಂಸದರ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅಭಿವೃದ್ಧಿಗೆ ಸಂಸದರು ಸಹಕಾರ ನೀಡ್ತಿಲ್ಲ ಅನ್ನೊದು ಹಾಸ್ಯಾಸ್ಪದ. ಮೈಸೂರಿನ ಅಭಿವೃದ್ಧಿ ವಿಚಾರವಾಗಿ ನಮ್ಮ ಸಂಸದರಿಗೆ ನೀವು ಪಾಠ ಮಾಡುವ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಮೇಯರ್ ನಡೆ ಖಂಡನೀಯ. ಮೇಯರ್ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಡಲಿ. ಇನ್ನುಳಿದ ಅವಧಿಯಲ್ಲಾದರೂ ಅಭಿವೃದ್ಧಿ ಕೆಲಸ ಮಾಡಿ. ಅಕ್ರಮ ಒತ್ತುವರಿಗಳನ್ನು ತೆರವು ಮಾಡಿ ಸಾರ್ವಜನಿಕರಿಗೆ ತೊಂದರೆ ತಪ್ಪಿಸಿ ಎಂದು ಮೇಯರ್ ತಸ್ನೀಂಗೆ ಶ್ರೀವತ್ಸ  ಸಲಹೆ ನೀಡಿದರು.mysore-mayor-tasneem-bjp-city-president-shrivatsa-outrage

ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯರಿಗಿಲ್ಲ.

ಇದೇ ವೇಳೆ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಶ್ರಿವತ್ಸ ಅವರು, ಸಿದ್ದರಾಮಯ್ಯ ನಮ್ಮ  ರಾಜ್ಯಾಧ್ಯಕ್ಷರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯರಿಗಿಲ್ಲ. ನಳಿನ್ ಕುಮಾರ್ ಕಟೀಲ್ ಒಬ್ಬ ಪೂರ್ಣವಾದಿಯಾಗಿ ಕೆಲಸ ಮಾಡಿದ ವ್ಯಕ್ತಿ. ಮೂರು ಭಾರಿ ಸಂಸದರಾಗಿ ಸೇವೆ ಮಾಡಿದವರು. ಸಿದ್ದರಾಮಯ್ಯ ಅನಾವಶ್ಯಕವಾಗಿ ನಮ್ಮ ಪಾರ್ಟಿ ಬಗ್ಗೆ ಮಾತನಾಡಬಾರದು. ನಮ್ಮದು ಕೇಡರ್ಸ್ ಬೇಸ್ಡ್ ಪಾರ್ಟ್. ಸಿದ್ದರಾಮಯ್ಯನವರು ಕೂಡಲೇ ಈ ಬಗ್ಗೆ ಕ್ಷಮೆಯಾಚಿಸಬೇಕು. ನಿಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ರೆ ದೂರು ನೀಡಿ. ಆಗಲಾದರೂ ನಿಮ್ಮ ಗೌರವ ಉಳಿಯುತ್ತೆ ಎಂದು ವಾಗ್ದಾಳಿ ನಡೆಸಿದರು.

Key words: mysore-mayor-tasneem-BJP city president-shrivatsa-outrage