ಮೈಸೂರು ನಗರದ ವೃತ್ತಗಳಿಗೆ ಪಾಲಿಕೆ ಸದಸ್ಯರ ಹೆಸರಿಡುವ ಸಂಸ್ಕೃತಿ ಕೈಬಿಡಿ- ಜಿಲ್ಲಾಧಿಕಾರಿಗೆ ಪತ್ರ ಬರೆದು ಸುಧಾಕರ್ ಎಸ್ ಶೆಟ್ಟಿ ಮನವಿ..

ಮೈಸೂರು ಅಕ್ಟೋಬರ್,23,2020(www.justkannada.in):  ಮೈಸೂರಿ ಲಲಿತಮಹಲ್  ಜಂಕ್ಷನ್ ಗೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಮೇಯರ್  ಹಾಗೂ ಸಂಸದರ ನಡುವೆ ನಡೆದ ವಾಗ್ವಾದ ಕುರಿತು ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು. ಮಾಜಿ ಅಧ್ಯಕ್ಷರಾದ ಸುಧಾಕರ ಎಸ್ ಶೆಟ್ಟಿ, ನಗರದ ವೃತ್ತಗಳಿಗೆ ಪಾಲಿಕೆ ಸದಸ್ಯರ ಹೆಸರಿಡುವ ಸಂಸ್ಕೃತಿಯನ್ನು ಕೈಬಿಡಿ ಎಂದು ಮೈಸೂರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪತ್ರ ಬರೆದಿರುವ ಸುಧಾಕರ ಎಸ್ ಶೆಟ್ಟಿ, ಈ ದಿನದ ಪತ್ರಿಕೆಗಳನ್ನು ಓದುತ್ತಿರುವಾಗ ಮೈಸೂರು ನಗರದ ವಿವಿಧ ವೃತ್ತ ಗಳಿಗೆ ಹೆಸರಿಡುವ ವಿಷಯದಲ್ಲಿ ಮೈಸೂರು ನಗರ ಪಾಲಿಕೆ ಹಾಗೂ ಮೈಸೂರಿನ ಸಂಸದರ ನಡುವೆ ನಡೆಯುತ್ತಿರುವ ವಾಗ್ವಾದ ದುರಾದೃಷ್ಟಕರ. ಮೈಸೂರು ನಗರದ ಕೆಲವು ವೃತ್ತಗಳಿಗೆ ನಗರ ಪಾಲಿಕೆ ಸದಸ್ಯರ ಹೆಸರಿಡುವುದಾಗಲಿ ,ಮೈಸೂರಿನ ಕೆಲವು ಮೃತಪಟ್ಟ ಪಾಲಿಕೆ ಸದಸ್ಯರ ಹೆಸರು ಇಡುವುದು ಖಂಡನೀಯ. ಕಾರಣ ಮೈಸೂರು ನಗರ ಪ್ರಖ್ಯಾತ ಪ್ರೇಕ್ಷಣೀಯ-ಸ್ಥಳವಾಗಿದ್ದು ಪ್ರವಾಸಿಗರು ಪ್ರಪಂಚದಾದ್ಯಂತ ಮೈಸೂರಿಗೆ ಬರುವಂತಹ ಸ್ಥಳ.

ಹೀಗಾಗಿ ನಗರ ಪಾಲಿಕೆ ಸದಸ್ಯರ ಹೆಸರು ನೀಡುತ್ತಾ ಹೋದರೆ ಇನ್ನು ಐದು ವರ್ಷಗಳಲ್ಲಿ ಮೈಸೂರಿಗೆ ಹೊಸಹೊಸ ವೃತ್ತಗಳನ್ನು ಹುಡುಕಬೇಕಾಗುತ್ತದೆ. ಈಗಿರುವ ನಗರಪಾಲಿಕೆಯ ಸದಸ್ಯರುಗಳನ್ನು ಸಂತೋಷಪಡಿಸುವುದಕೋಸ್ಕರ ಈ ತರಹದ ಹೆಸರಿಡುವ ಸಂಸ್ಕೃತಿಯನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.

Images converted to PDF format.

ವೃತ್ತಗಳಿಗೆ ಸ್ವಾತಂತ್ರ ಹೋರಾಟಗಾರರ ಹೆಸರಿಡಿ…

ಹಾಗೆಯೇ ಮುಂದುವರೆದು, ದೇಶದ ಪ್ರಮುಖರ ಅದರಲ್ಲೂ ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ನಗರದ ವೃತ್ತಗಳಿಗೆ ಇಟ್ಟು ಆ ಹೆಸರಿನ ಕೆಳಗೆ ಆ ಸ್ವಾತಂತ್ರ ಹೋರಾಟಗಾರರ ಹೋರಾಟದ ದಾರಿಯನ್ನು ವಿವರಿಸಿದರೆ, ಹೊರದೇಶ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಕರ್ನಾಟಕದ ಧೀಮಂತ ವ್ಯಕ್ತಿಗಳು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎನ್ನುವ ಪರಿಚಯ ನೀಡಿದಂತಾಗುವುದು. ಇದರಿಂದ ದೇಶದ ಸ್ವಾತಂತ್ರ್ಯ ಸಮಯದಲ್ಲಿ ಕರ್ನಾಟಕದ ಸ್ವಾತಂತ್ರ್ಯಹೋರಾಟಗಾರರ ಕಾಣಿಕೆಯನ್ನು ಪ್ರಪಂಚಕ್ಕೆ ಅರಿವು ನೀಡಿದಂತಾಗುತ್ತದೆ. ಕರ್ನಾಟಕದ ಕನ್ನಡಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಬಹುದೊಡ್ಡ ಹೋರಾಟವನ್ನು ನೀಡಿದ್ದಾರೆ. ಆದರೆ ನಾವೆಲ್ಲ ನೋಡುತ್ತೇವೆ ಉತ್ತರ ಭಾರತದವರ  ಹೆಸರು ಮಾತ್ರ  ಎಲ್ಲಾ ಕಡೆ ಮುಂಚೂಣಿಯಲ್ಲಿದೆ. ಕಿತ್ತೂರು ರಾಣಿ ಚೆನ್ನಮ್ಮ ಒನಕೆ ಓಬವ್ವ ಇವರುಗಳ ಹೆಸರಿರಬಹುದು ಎಂದು ಸುಧಾಕರ್ ಎಸ್. ಶೆಟ್ಟಿ ಸಲಹೆ ನೀಡಿದ್ದಾರೆ.

ಕಾರ್ನಾಡ ಸದಾಶಿವರಾಯರು , ಡಾಕ್ಟರ್ ಎಂ ಎಸ್ ಹರ್ಡೀಕ ರ್ ,  ಗೋಪಾಲಕೃಷ್ಣ ಗೋಖಲೆ,  ನಿಜಲಿಂಗಪ್ಪನವರು ,ನಿಟ್ಟೂರು ಶ್ರೀನಿವಾಸ್ ರಾಯರು, ಆಲೂರು ವೆಂಕಟರಾವ್ ರವರು, ಬಳ್ಳಾರಿಯ  ಸುಬ್ರಮಣ್ಯಂ, ಸಂಗೊಳ್ಳಿ ರಾಯಣ್ಣ , ಉಮಾಬಾಯಿ ಕುಂದಾಪುರ, ಯಶೋಧರ ದಾಸಪ್ಪ , ವಿ. ಎನ್ ಓಕೆರು, ಕಮಲಾದೇವಿ ಚಟ್ಟೋಪಾಧ್ಯಾಯರು  ಇವರ ಹೆಸರನ್ನು ಇಟ್ಟರೆ ನಗರಕ್ಕೆ ಒಂದು ಗೌರವ ತಂದಂತಾಗುತ್ತದೆ.

ನಮ್ಮಲ್ಲಿ ಎಂಟು ಜನ  ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರಿದ್ದಾರೆ.  ಕುವೆಂಪು ,ದ ರಾ ಬೇಂದ್ರೆ ,ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ ಗೋಕಾಕ್, ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಇವರ ಹೆಸರುಗಳನ್ನು ಇಡಿ. ಮೈಸೂರು ನಗರ ಪಾಲಿಕೆ ಮತ್ತು ನಗರಾಭಿವೃದ್ಧಿಗೆ ಅಭಿವೃದ್ಧಿ, ಸ್ವಚ್ಛ ನಗರವೇ ಮೂಲಮಂತ್ರ ವಾಗಿರಬೇಕು.ಅ ದರಿಂದ ನಗರದ ಹಿರಿಮೆ ಹೆಚ್ಚಬೇಕು ಎಂದು ಜಿಲ್ಲಾಧಿಕಾರಿಗೆ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.

ನಗರಪಾಲಿಕೆ ಮತ್ತು ಮುಡಾ ಈ ಎರಡರ ಕೆಲಸ ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು…

ಪ್ರತಿನಿತ್ಯ 500 ಮೆಟ್ರಿಕ್ ಟನ್ ಕಸ ಬರುತ್ತಿದೆ ಆದರೆ 200 ಟನ್ ಮಾತ್ರ ವಿಲೇವಾರಿವಾಗುತ್ತದೆ. ಉಳಿದ 300 ಟನ್ ಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಚಿಂತನೆ  ಮಾಡಬೇಕು  ಹಾಗೂ ಕಟ್ಟಡ ಡಬರಿ ಗಳು 100 ಟನ್ ಮೇಲೆ ಬರುತ್ತಿದೆ ಅದರ ಬಗ್ಗೆಯೂ ಚಿಂತನೆ ಮಾಡಬೇಕು. ಆಗ ಮಾತ್ರ ನಗರಕ್ಕೆ ಸ್ವಚ್ಛ ನಗರ ಎಂದು ಹೆಸರು ಬರಲು ಸಾಧ್ಯ. ನಗರಪಾಲಿಕೆ ಮತ್ತು ಮುಡಾ ಈ ಎರಡರ ಕೆಲಸ ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು. ರಾಜಕೀಯ ಮೂಲಮಂತ್ರವಾಗಿ ಇರಬಾರದು. ಭ್ರಷ್ಟಾಚಾರದ ಮೂಲ ಮಂತ್ರವಾಗಬಾರದು. ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಮೈಸೂರು ನಗರದ ಹೀಗಿರುವ ಹಲವಾರು ಒತ್ತಡಗಳಲ್ಲಿ ಯಾರ್ಯಾರೋ ಹೆಸರನ್ನು ಇಟ್ಟಿದ್ದೀರಾ ಎಲ್ಲಾ ಹೆಸರುಗಳನ್ನು ಬದಲಾವಣೆ ಮಾಡಬೇಕು. ರಾಜ್ಯ, ರಾಜ್ಯಕ್ಕೆ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರುಗಳು ಮತ್ತೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರ ಹೆಸರು ಹಾಗೆಯೇ ಸ್ವಾತಂತ್ರ ಹೋರಾಟಗಾರ ಹೆಸರಿಡಬೇಕು ಎಂದು ಸುಧಾಕರ ಎಸ್ ಶೆಟ್ಟಿ ಒತ್ತಾಯಿಸಿದ್ದಾರೆ.

Key words: Mysore- city- circles — culture –name- city corporation-members-Sudhakar S Shetty –letter- DC