ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಲಾರಿ ಚಾಲನೆ: ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ.

ಮೈಸೂರು,ಫೆಬ್ರವರಿ,3,2022(www.justkannada.in): ಕುಡಿದ ಮತ್ತಿನಲ್ಲಿ  ಲಾರಿ ಚಾಲಕನೋರ್ವ ಅಡ್ಡಾದಿಡ್ಡಿ ಲಾರಿ ಚಾಲನೆ ಮಾಡಿದ್ದು  ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ  ನಡೆದಿದೆ.

ಗ್ರಾಮದ ಬಳಿ ಕುಡಿದ ಮತ್ತಿನಲ್ಲಿ ಲಾರಿ ಚಾಲಕ ಪೂರ್ತಿ ಲೋಡ್ ಆಗಿದ್ದ ಲಾರಿಯನ್ನ ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು, ಲಾರಿಯನ್ನು ಹಿಂಬಾಲಿಸಿ ಚಾಲಕನ ಕೆಳಗಿಸಿ ಆಗಬಹುದಾಗಿದ್ದಂತಹ ಅನಾಹುತವನ್ನ ತಪ್ಪಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ  ಲಾರಿ ಚಾಲಕನನ್ನ‌ ವಶಕ್ಕೆ ಪಡೆದಿದ್ದಾರೆ.  ಲಾರಿ ಚಾಲಕ ತಮಿಳುನಾಡು ಮೂಲದವನಾಗಿದ್ದಾನೆ.ಕಂಠಪೂರ್ತಿ ಕುಡಿದು ಲಾರಿ ಚಾಲನೆ ಮಾಡುತ್ತಿದ್ದನು.  ಅಡ್ಡಾದಿಡ್ಡಿ ಲಾರಿ ಚಾಲನೆ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.

Key words: mysore-lorry-driver-police