ಮೈಸೂರು,ಫೆಬ್ರವರಿ,3,2022(www.justkannada.in): ಕಾಂಗ್ರೆಸ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಪಕ್ಷ ತೊರೆಯಲು ಮುಂದಾಗಿರುವ ಸಿಎಂ ಇಬ್ರಾಹಿಂ ಫೆಬ್ರವರಿ 14 ರಂದು ತಮ್ಮ ಮುಂದಿನ ರಾಜಕೀಯದ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.![]()
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ. ಅಸಮಾಧಾನ ಆಗಿರೋದು ನಿಜ, ಆದರೆ ಅವರ ಮನವೊಲಿಸುತ್ತೇವೆ. ಸಮಸ್ಯೆ ಬಗ್ಗೆ ಮಾತುಕತೆ ನಡೆಸಿ ಬಗೆಹರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಅಧಿಕಾರ ಸಿಕ್ಕಾಗ ಅನುಭವಿಸೋದು, ಇಲ್ಲದಿದ್ದಾಗ ಅಸಮಾಧಾನಗೊಳ್ಳುವುದು ಸಹಜ. ಸ್ಥಳೀಯ ವಿದ್ಯಾಮಾನಗಳಿಂದ ನೋವಾಗಿರಬಹುದು. ನಮಗೆ ಸಿಎಂ ಇಬ್ರಾಹಿಂ ರವರ ಮೇಲೆ ಗೌರವ ಇದೆ. ಪ್ರಸ್ತುತ ವಿದ್ಯಮಾನಗಳಲ್ಲಿ ಜಾತಿವಾರು ಸ್ಥಾನಮಾನ ಕೇಳುವ ಹಾಗಿಲ್ಲ. ನಿನ್ನೆ ಮೈಸೂರಿಗೆ ಸಿಎಂ ಇಬ್ರಾಹಿಂ ಬಂದಿದ್ದಾರೆ. ಸ್ಥಳೀಯ ಕಾರ್ಯಕರ್ತರ ಮನೆಗೆ ಬಂದು ಕೆಲಕಾಲ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಬೇರೆ ಆರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತನ್ವೀರ್ ಸೇಠ್ ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಸಿಎಂ ಇಬ್ರಾಹಿಂ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಈ ರೀತಿ ಮಾತನಾಡೋದು ತಪ್ಪು ಎಂದು ಸಿದ್ದರಾಮಯ್ಯ ವಿರುದ್ಧದ ಹೇಳಿಕೆಯನ್ನ ಖಂಡಿಸಿದರು.
Key words: CM Ibrahim – Congress-MLA -Tanveer Seth






