ಪತಿ,ಪತ್ನಿ ನಡುವೆ ಜಗಳ: ಅಳಿಯನಿಂದಲೇ ಅತ್ತೆಯ ಹತ್ಯೆ.

ಬೆಂಗಳೂರು,ಫೆಬ್ರವರಿ,25,2023(www.justkannada.in): ಪತಿ  ಪತ್ನಿ ನಡುವೆ ಜಗಳದಲ್ಲಿ ಅಳಿಯನಿಂದಲೇ ಅತ್ತೆ ಕೊಲೆಯಾಗಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.

ಕೆಂಗೇರಿಯ ಬೃಂದಾವನ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಇಳವರಸಿ(48) ಹತ್ಯೆಯಾದವರು. ದಿವಾಕರ್ ಎಂಬುವವನೇ ತನ್ನ ಅತ್ತೆ ಇಳವರಸಿಯನ್ನ ಹತ್ಯೆಗೈದಿದ್ದಾನೆ. ದಿವಾಕರ್ ತನ್ನ ಪತ್ನಿಯ ಜೊತೆ ಜಗಳ ತೆಗೆದು ಮಗುವನ್ನು ಕರೆದೊಯ್ದಿದ್ದ.

ನಂತರ ಮೊಮ್ಮಗನನ್ನ ಕರೆ ತರಲು ಅತ್ತೆ ಇಳವರಸಿ ಅಳಿಯನ ಮನೆಗೆ ತೆರಳಿದ್ದು ಈ ವೇಳೆ ಇಳವರಸಿಯನ್ನ ಅಳಿಯ ದಿವಾಕರ್ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Key words: kengeri-son -in -law –murder- Aunt