Monday, September 28, 2026

BDA Apartments

ಮನೆಯೊಳಗೆ ನುಗ್ಗಿ ಮೇಕೆ ಮೇಲೆ ದಾಳಿ ಮಾಡಿ ಕೊಂದ ಚಿರತೆ… BDA JK_Adv BDA Adv
Home Crime ಮನೆಯೊಳಗೆ ನುಗ್ಗಿ ಮೇಕೆ ಮೇಲೆ ದಾಳಿ ಮಾಡಿ ಕೊಂದ ಚಿರತೆ….

ಮನೆಯೊಳಗೆ ನುಗ್ಗಿ ಮೇಕೆ ಮೇಲೆ ದಾಳಿ ಮಾಡಿ ಕೊಂದ ಚಿರತೆ….

ಮೈಸೂರು,ಆ,8,2019(www.justkannada.in): ಮನೆ ಒಳಗೆ  ಚಿರತೆ ದಾಳಿ ನಡೆಸಿದ ಪರಿಣಾಮ ಮೇಕೆ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಹೊರವಲಯದ ಚಿಕ್ಕೇಗೌಡನಹುಂಡಿಯಲ್ಲಿ ಈ ಘಟನೆ ನಡೆದಿದೆ. ಸಾವಿತ್ರಮ್ಮ ಎಂಬುವವರು ಸಾಕಿದ್ದ ಮೇಕೆ ಮೇಲೆ ಇಂದು ಮುಂಜಾನೆ ಚಿರತೆ ದಾಳಿ ನಡೆಸಿದೆ.  ಪಕ್ಕದಲ್ಲೆ‌ ಇದ್ದ ಮತ್ತೇರಡು ಮೇಕೆಗಳು ಕೂಗುತ್ತಿದಂತೆ  ಮನೆಯವರು ಎದ್ದು ಬಂದಿದ್ದು  ಮನೆಯವರು ಕೂಗುತ್ತಿದ್ದಂತೆ ಚಿರತೆ ಮೇಕೆ ಬಿಟ್ಟು ಪರಾರಿಯಾಗಿದೆ.

ಕಳೇದ ಎರಡು ಮೂರು ದಿನದಿಂದ  ಊರಿನಲ್ಲಿ  ಚಿರತೆ ಅಡ್ಡಾಡುತ್ತಿದ್ದು ಕಳೆದೆರೆಡು ದಿನಗಳ ಹಿಂದೆ ಎರಡು ನಾಯಿಗಳನ್ನ ಏಳೆದುಕೊಂಡು ಹೋಗಿತ್ತು. ಚಿರತೆ‌ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ  ಗ್ರಾಮಸ್ಥರು ಮನವಿ ಮಾಡಿದ್ದು, ಗ್ರಾಮಸ್ಥರ ಮಾತನ್ನ ಅರಣ್ಯಾಧಿಕಾರಿಗಳು ಕಿವಿಗೂ  ಹಾಕಿಕೊಂಡಿಲ್ಲ . ಹೀಗಾಗಿ ಅರಣ್ಯಾಧಿಕಾರಿಗಳ ವರ್ತನೆಗೆ ಗ್ರಾಮಸ್ಥರು ಬೇಸತ್ತಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: mysore- Leopard-attack- killing – goat