ಮೈಸೂರಿನಲ್ಲಿ ಕೆಎಎಸ್ ಹಾಗೂ ಎಫ್ ಡಿಎ ಪರೀಕ್ಷೆ ತರಬೇತಿ ಶಿಬಿರ: 400ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗಿ…

ಮೈಸೂರು,ಮಾ,10,2020(www.justkannada.in):  ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ 45 ದಿನಗಳ ಕಾಲ ಕೆಎಎಸ್ ಹಾಗೂ ಎಫ್ ಡಿಎ ಪರೀಕ್ಷೆ ತರಬೇತಿ ಶಿಬಿರ ಆಯೋಜನೆ ಮಾಡಲಾಗಿದೆ.

ಮುಕ್ತ ವಿವಿ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಂತ್ರಿಗಳ ಕಾರ್ಯದರ್ಶಿ ಪ್ರದೀಪ್ ಅವರು  ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು. ಈ ವೇಳೆ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ. ಕೆಎಸ್ ಒಯು ಕುಲಪತಿ ವಿದ್ಯಾಶಂಕರ್, ವಿವಿ ಕುಲಸಚಿವ ಲಿಂಗರಾಜ ಗಾಂಧಿ ಭಾಗಿಯಾಗಿದ್ದರು.mysore-ksou-kas-fda-exam-training-camp

ತರಬೇತಿ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗಿಯಾಗಿದ್ದು  ಇಂದಿನಿಂದ‌ 45 ದಿನಗಳ ಕಾಲ ಕೆಎಎಸ್ ಹಾಗೂ ಎಫ್ ಡಿಎ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರದೀಪ್ ಐಎಎಸ್ ಮಾಡುವ ಕನಸು ನನಗೆ ಇರಲಿಲ್ಲ. ನನ್ನ ತಾಯಿಯ ಕನಸು ಇದಾಗಿತ್ತು. ನಾನೂ ಇಂಜಿನಿಯರಿಂಗ್ ವಿದ್ಯಾರ್ಥಿ. ವಿಷಯಕ್ಕೆ ಆಯ್ಕೆ ಮಾಡಿಕೊಳ್ಳುವಾಗ ನಿಮಗೆ ಇಷ್ಟವಾದದ್ದನ ಆಸಕ್ತಿ ಇರೋದನ್ನ ಆಯ್ಕೆ ಮಾಡಿಕೊಳ್ಳಬೇಕು.ಪರೀಕ್ಷೆಗಳಲ್ಲಿ ಸಮಯ ಹೊಂದಾಣಿಕೆ ಬಹಳ ಮುಖ್ಯ. ಸಣ್ಣ ಬುದ್ಧಿವಂತಿಕೆ ಇದ್ದರೆ ಸಾಕು. ನಿಮಗೆ ನಿಮ್ಮ ಮೇಲೆ ನಂಬಿಕೆ ಇರಬೇಕು. ಆಗ ಮಾತ್ರ ನಿಮ್ಮ ಗುರಿ ಮಟ್ಟಲು ಸಾದ್ಯ. ಎಲ್ಲರೂ ಕೂಡ ಈ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.

Key words: mysore- ksou- KAS –FDA- Exam- Training Camp