“ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ” ಪ್ರದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಅಕ್ಟೋಬರ್ 02, 2021 (www.justkannada.in): 2020ನೇ ಸಾಲಿನ ಕರ್ನಾಟಕ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ”ಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರದಾನ ಮಾಡಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಹಾಗೂ ಮುಧೋಳದ ಗಾಂಧಿ-ವಿನೋಬಾ ಭಾವೆ ಅವರ ಅನುಯಾಯಿ ಮೀರಾಬಾಯಿ ಕೊಪ್ಪೀಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಿದ್ದಗಂಗಾ ಮಠದ ಪರವಾಗಿ ಲಿಂಗೈಕ್ಯ ಶ್ರೀಗಳ ವೈದ್ಯರಾಗಿ 40 ವರ್ಷ ಸೇವೆ ಸಲ್ಲಿಸಿದ್ದ ಡಾ. ಶಿವಪ್ಪ ಹಾಗೂ ಮೀರಾಬಾಯಿ ಪರವಾಗಿ ಸಚಿವ ಗೋವಿಂದ ಕಾರಜೋಳ ಪ್ರಶಸ್ತಿ ಸ್ವೀಕರಿಸಿದರು.

key words: CM delivered “Mahatma Gandhi Seva Award”