ಕಾಂಗ್ರೆಸ್‌ ಅಭ್ಯರ್ಥಿ ಟೀಕಿಸುವ ಭರದಲ್ಲಿ KSOU  ಸರ್ಟಿಫಿಕೆಟ್‌ ಲೇವಡಿ ಮಾಡಿದ ಪ್ರತಾಪ್‌ ಸಿಂಹ..

Mysore, KSOU, BJP, Prathap Simha, controversy 

ಮೈಸೂರು, ಏ.03, 2024 : (www.justkannada.in news ) ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಪ್ರತಾಪ್‌ ಸಿಂಹ, ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಕಾಂಗ್ರೆಸ್‌ ನ ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್‌ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆಗೆ ಕಾರಣವಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಯದುವೀರ್‌ ನಾಮಪತ್ರ ಸಲ್ಲಿಕೆ ವೇಳೆ ಆಗಮಿಸಿದ್ದ ಪ್ರತಾಪ್‌ ಸಿಂಹ, ಮಾಧ್ಯಮಗಳ ಜತೆ ಮಾತನಾಡಿ…

ಕಾಂಗ್ರೆಸ್ ನವರು ಮೊದಲು ಒಳ್ಳೆಯ ಒಕ್ಕಲಿಗರಿಗೆ ಟಿಕೆಟ್ ಕೊಡಲಿ. ನಾಳೆ ಇನ್ನು ಒಂದು ದಿನ ಅವಕಾಶ ಇದೆ. ಈಗಲಾದ್ರು ನಿಮಗೆ ಅಭ್ಯರ್ಥಿ ಬದಲಾಯಿಸಲು ಅವಕಾಶ ಇದೆ. ಅದನ್ನು ಬೇಕಾದ್ರೆ ಬಳಸಿಕೊಳ್ಳಿ.

ಒಕ್ಕಲಿಗರನ್ನೆಲ್ಲ ಇಷ್ಟು ದಿನ ತುಚ್ಚವಾಗಿ ಬೈಯ್ದ ಹೊಲಸು ಬಾಯಿಯ ವ್ಯಕ್ತಿ ನಿಮ್ಮ ಅಭ್ಯರ್ಥಿ. ಒಕ್ಕಲಿಗರು ಎಂದರೆ ಅವರಿಗೆ ನೇರವಂತಿಕೆ, ಗಡಸು ಸ್ವಭಾವ ಇರುತ್ತೆ. ನಿಮ್ಮ ಅಭ್ಯರ್ಥಿಗೆ ಈ ಯಾವುದಾದರು ಒಂದು ಲಕ್ಷಣ ಇದೆಯಾ.?

ಮೊದಲು ಅಭ್ಯರ್ಥಿ ಬದಲಾಯಿಸಿ ಆಮೇಲೆ ಗೆಲ್ಲುವುದಕ್ಕೆ ಒಕ್ಕಲಿಗರ ಕಾರ್ಡ್ ಫ್ಲೇ ಮಾಡುವಿರಂತೆ. ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ.

ಮುಂದುವರೆದು,  ಚುನಾವಣೆ ಗೆಲ್ಲಲು ಮೊದಲು ಒಳ್ಳೆಯ ಅಭ್ಯರ್ಥಿ ಇರಬೇಕು. ನಿಮ್ಮ ಅಭ್ಯರ್ಥಿ ಈಗ ನಾನು ಒಕ್ಕಲಿಗ ಅಂತ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ. ಆ ಪ್ರಮಾಣ ಪತ್ರ ಯಾವುದು. ಯಾವುದೋ ಕೆ.ಎಸ್.ಓ.ಯು ಅಲ್ಲಿ ಇಲ್ಲಿ ಸಿಗುತ್ತಿತ್ತಲ್ಲ ಆ ಪ್ರಮಾಣ ಪತ್ರನಾ..? ಎಂದು ವ್ಯಂಗ್ಯವಾಡಿದ್ದಾರೆ.

 

ಲಕ್ಷ್ಮಣ್‌ ಜಾತಿ ಪ್ರಮಾಣ ಪತ್ರ ಟೀಕಿಸುವ ಭರದಲ್ಲಿ ದೂರ ಶಿಕ್ಷಣದಲ್ಲಿ ದಾಖಲೆ ನಿರ್ಮಸಿರುವ, ಮೈಸೂರಿನಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಮಾಣಪತ್ರದ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಾರೆ.

KEY WORDS : Mysore, KSOU, BJP, Prathap Simha, controversy

 

ENGLISH SUMMARY : 

Pratap Simha, who has always been in the news for making controversial statements, has now landed in another controversy.

Congress’ Lok Sabha candidate M Laxman has stoked a controversy by criticising him. Pratap Simha, who was present at the time of filing of nomination papers of BJP candidate Yaduveer, spoke to the media.

To win an election, there has to be a good candidate. Your candidate has now come with a certificate that he is a Vokkaliga. What is that certificate. Was it a certificate that was found here and there in some KSOU? That’s sarcastic.