ಬರ ಪರಿಹಾರ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ- ಅಮಿತ್ ಶಾಗೆ ಸಿಎಂ ಸಿದ್ಧರಾಮಯ್ಯ ಸವಾಲು.

ಮೈಸೂರು,ಏಪ್ರಿಲ್,3, 2024 (www.justkannada.in):  ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬರ ಪರಿಹಾರ  ಕುರಿತು ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲು ಅಮಿತ್ ಶಾಗೆ ಧಮ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ,  ಅಮಿತ್ ಶಾ ನಿನ್ನ ಬಂದು ಸುಳ್ಳು ಹೇಳಿ ಹೋಗಿದ್ದಾರೆ. ಅಮಿತ್ ಶಾ ಒಂದೇ ವೇದಿಕೆಗೆ ಚರ್ಚೆಗೆ ಬರಲಿ.  ನಾವು ಸುಳ್ಳು ಹೇಳ್ತಿದ್ದೀವಾ…?  ನೀವು ಸುಳ್ಳು ಹೇಳ್ತಿದ್ದೀರಾ ಗೊತ್ತಾಗಲಿ ಎಂದು  ಸವಾಲು ಹಾಕಿದರು.

ಕ್ಷೇತ್ರದಲ್ಲಿ ಮರ್ಯಾದೆ ಉಳಿಸೋಕೆ ಲೀಡ್ ಕೊಡಿ.  ನಾನೇ ಸಿದ್ದರಾಮಯ್ಯ ಅಭ್ಯರ್ಥಿ ಎಂದುಕೊಂಡು ಲೀಡ್ ಕೊಡಿ.  ಲಕ್ಷ್ಮಣ್  ಗೆದ್ದರೇ ಡಿಕೆ ಶಿವಕುಮಾರ್ ಗೆದ್ದಂತೆ, ಲಕ್ಷ್ಮಣ್ ಗೆದ್ದರೇ  ನಾನು ಗೆದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: mysore, Amith sha, CM, Siddaramaiah